ಹುಳಿಯಾರು ಹೋಬಳಿಯ ಹೆಚ್.ಮೇಲನಹಳ್ಳಿ ಗ್ರಾಮದ ಶ್ರೀ ದುರ್ಗಾಂಬದೇವಿ ಜಾತ್ರಾಮಹೋತ್ಸವ ಶುಕ್ರವಾರದಂದು ಕಂಕಣಧಾರಣೆ, ಮಧುವಣಗಿತ್ತಿ ಕಾರ್ಯದೊಂದಿಗೆ ಚಾಲನೆಗೊಂಡಿದೆ.
ರಾತ್ರಿ ದಸೂಡಿ ಶ್ರೀ ದುರ್ಗಮ್ಮನವರ ಆಗಮನ ಹಾಗೂ ಕೂಡುಭೇಟಿ ನಡೆಯಿತು. ಏ.೪ರ ಶನಿವಾರ ಹೊಳೆಸೇವೆ, ಈಡುಗಾಯಿಸೇವೆ ,ಏ.೫ರ ಭಾನುವಾರ ಆರತಿಬಾನ,ಘಟೆ ಸಮರ್ಪಣೆ ನಡೆದು ನಂತರ ಉತ್ಸವ ಹಾಗೂ ಸೋಮನಕುಣಿತ ನಡೆಯಲಿದೆ.ಏ.೬ರ ಸೋಮವಾರ ಭಕ್ತಾಧಿಗಳಿಂದ ಮಡಿಲಕ್ಕಿ ಸೇವೆಯಿದ್ದು ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಸಮಿತಿಯವರು ಕೋರಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ