ಹುಳಿಯಾರು ಪಟ್ಟಣದ ಗ್ರಾಮ ಪಂಚಾಯ್ತಿಯಲ್ಲಿ ಮಹಾನ್ ದಾರ್ಶನಿಕರಾದ ಯತಿಶ್ರೇಷ್ಠ ಶ್ರೀ ಶಂಕರಾಚಾರ್ಯರ ಜಯಂತಿಯನ್ನು ಗ್ರಾ.ಪಂ.ಅಧ್ಯಕ್ಷೆ ಕಾಳಮ್ಮ ಹಾಗೂ ವಿಪ್ರ ಸಂಘದ ಸದಸ್ಯರುಗಳ ಸಮ್ಮುಖದಲ್ಲಿ ಗುರುವಾರ ಆಚರಿಸಲಾಯಿತು.
ಹುಳಿಯಾರು ಗ್ರಾ.ಪಂನಲ್ಲಿ ಯತಿಶ್ರೇಷ್ಠ ಶ್ರೀ ಶಂಕರಾಚಾರ್ಯರ ಜಯಂತಿಯನ್ನು ಗ್ರಾ.ಪಂ.ಅಧ್ಯಕ್ಷೆ ಕಾಳಮ್ಮ ಹಾಗೂ ವಿಪ್ರ ಸಂಘದ ಸದಸ್ಯರುಗಳ ಸಮ್ಮುಖದಲ್ಲಿ ಗುರುವಾರ ಆಚರಿಸಲಾಯಿತು. |
ಶಂಕರಾಚಾರ್ಯರ ಭಾವಚಿತ್ರಕ್ಕೆ ಪೂಜೆಸಲ್ಲಿಸಿದ ನಂತರ ವಿಪ್ರ ಸಂಘದ ಹು.ಲ.ವೆಂಕಟೇಶ್ ಮಾಸ್ಟರ್ ಮಾತನಾಡಿ, ಶ್ರೀಶಂಕರರು ಅದ್ವೈತ ದರ್ಶನವನ್ನು ಭಾರತದ ನಾಲ್ಕೂ ದಿಕ್ಕುಗಳಲ್ಲಿ ಸ್ಥಾಪಿಸಿದ ಮಹಾಮಹಿಮರಾಗಿದ್ದು, ವೇದಾಂತ ತತ್ವಕ್ಕೆ ಆದಿ ಶಂಕರರು ಹೆಚ್ಚಿನ ಕೊಡುಗೆ ನೀಡಿದ್ದಾರೆ.ವೈಶಾಖ ಮಾಸದ ಶುಕ್ಲ ಪಕ್ಷದ ಪಂಚಮಿ ದಿನದಂದು ಶಂಕರಾಚಾರ್ಯರ ಜನ್ಮ ದಿನ ಆಚರಿಸುತ್ತಾರೆ.ಇವರನ್ನು ಆದಿ ಶಂಕರ, ಶಂಕರ ಭಗವತ್ಪಾದಾಚಾರ್ಯ ಎಂದೂ ಸಹ ಕರೆಯುತ್ತಾರೆ. ಸುಮಾರು ೮ನೇ ಶತಮಾನದ ಮಹನೀಯರಲ್ಲಿ ಶಂಕರರೂ ಸಹ ಒಬ್ಬರಾಗಿದ್ದು,ಶಂಕರರು ತಮ್ಮ ಜೀವಿತದ ಕಡಿಮೆ ಅವಧಿಯಲ್ಲಿ ಮಾಡಿದ ಸಾಧನೆ ಅಪಾರವಾದದ್ದು ಎಂದರು. ಹಿಂದೂ ಧರ್ಮದ ಪ್ರಚಾರಕ್ಕಾಗಿ ನಾಲ್ಕು ದಿಕ್ಕುಗಳಲ್ಲಿ ೪ ಮಠಗಳನ್ನು ಸ್ಥಾಪಿಸಿದರು. ಕರ್ನಾಟಕದಲ್ಲಿ ಶೃಂಗೇರಿ ಶಾರದ ಪೀಠ ,ಗುಜರಾತ್ ರಾಜ್ಯದ ದ್ವಾರಕದಲ್ಲಿ, ಒರಿಸ್ಸಾದ ಪೂರಿಯಲ್ಲಿ ಮತ್ತು ಉತ್ತರಾಖಾಂಡದಲ್ಲೂ ಸಹ ಮಠಗಳನ್ನು ಸ್ಥಾಪಿಸಿದ್ದಾರೆ. ಶಂಕರಾಚಾರ್ಯರು ಬಹಳಷ್ಟು ರಚನೆಗಳನ್ನೂ ಮಾಡಿದ್ದು, ಭಗವದ್ಗೀತೆ, ಉಪನಿಷದ್ ಮತ್ತು ಬ್ರಹ್ಮ ಸೂತ್ರಗಳಿಗೆ ಭಾಷ್ಯ ಬರೆದಿದ್ದಾರೆ. ಅದ್ವೈತ ವೇದಾಂತ ಅಧ್ಯಯನ ಮಾಡುವವರು ಈ ಭಾಷ್ಯಗಳನ್ನೇ ಇಂದಿಗೂ ಅನುಸರಿಸುತ್ತಾರೆ ಎಂದರು.
ಪಿಡಿಓ ಅದವೀಶ್ ಕುಮಾರ್ ಮಾತನಾಡಿ ವೇದಾಂತ ತತ್ವಕ್ಕೆ ಆದಿ ಶಂಕರರು ನೀಡಿದ ಕೊಡುಗೆಯನ್ನು ಪರಿಗಣಿಸಿದ ರಾಜ್ಯ ಸರ್ಕಾರ ಶ್ರೀ ಶಂಕರ ಜಯಂತಿ ದಿನವನ್ನು ತತ್ವಜ್ಞಾನಿಗಳ ದಿನವನ್ನಾಗಿ ಘೋಷಿಸಿದ್ದರ ಹಿನ್ನಲೆಯಲ್ಲಿ ಗ್ರಾ.ಪಂಯಲ್ಲಿ ಶಂಕರರ ಜಯಂತಿ ಆಚರಿಸುತ್ತಿರುವುದಾಗಿ ತಿಳಿಸಿದರು. ಮುಂದೆಯೂ ಸಹ ಇದನ್ನು ನಡೆಸಿಕೊಂಡು ಹೋಗುವುದಾಗಿ ತಿಳಿಸಿದರು.
ಈ ವೇಳೆ ವಿಪ್ರ ಸಂಘದ ಹು.ಕೃ.ವಿಶ್ವನಾಥ್, ರಂಗನಾಥ ಪ್ರಸಾದ್, ಬಿ. ಸೀತಾರಾಮಯ್ಯ,ಪರಮೇಶ್ವರ್,ಹೆಚ್.ಕೆ.ವೆಂಕಟರಾಯ, ಅಶ್ವಥ್ತನಾರಾಯಣ್, ಶ್ರೀಧರ್ ಅಂಬೇಕರ್, ಸುಬ್ರಮಣ್ಯ,ಗಣೇಶ್, ಗ್ರಾ.ಪಂ.ಸದಸ್ಯರಾದ ಜಹೀರ್ ಸಾಬ್, ವೆಂಕಟಮ್ಮ, ಸಿಬ್ಬಂದಿಗಳಾದ ಆನಂದ್,ರೇಖಾ ಇತರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ