ಹೆಚ್ಚು ಪೋಷಕರು ತಮ್ಮ ಮಕ್ಕಳನ್ನು ಡಾಕ್ಟರ್ , ಇಂಜಿನಿಯರ್ ಕೋರ್ಸ್ ಸೇರಿದಂತೆ ಇನ್ನಿತರ ಉನ್ನತ ಹುದ್ದೆಗಳಿಗೆ ಕಳಿಸುವ ಬಯಕೆ ಹೊಂದಿರುತ್ತಾರೆ ಹೊರತು ಸಂಗೀತ ಸಾಹಿತ್ಯದ ಕಲಿಕೆಗೆ ಮಕ್ಕಳನ್ನು ಕಳುಹಿಸದೆ ಪ್ರಸ್ತುತದಲ್ಲಿ ಸಂಗೀತ ಕಲಿಯುವವರ ಸಂಖ್ಯೆ ವಿರಳವಾಗಿದೆ ಎಂದು ಹಾರ್ಮೋನಿಯಂ ಮಾಸ್ಟರ್ ಶ್ರೀನಿವಾಸ್ ವಿಷಾಧಿಸಿದರು.
ಹುಳಿಯಾರಿನ ಶ್ರೀಮಾರುತಿ ಸಂಗೀತ ಪಾಠಶಾಲೆ ವತಿಯಿಂದ ಗಾಂಧಿಭವನದಲ್ಲಿ ಹತ್ತು ದಿನಗಳಕಾಲದ ಉಚಿತ ಸಂಗೀತ ಶಾಲೆಯ ಉದ್ಘಾಟನೆ ನಡೆಯಿತು. |
ಹುಳಿಯಾರಿನ ಶ್ರೀ ಮಾರುತಿ ಸಂಗೀತ ಪಾಠಶಾಲೆ ವತಿಯಿಂದ ಗಾಂಧಿಭವನದಲ್ಲಿ ಶುಕ್ರವಾರ ಅಯೋಜಿಸಿದ್ದ ೧೦ ದಿನಗಳಕಾಲದ ಉಚಿತ ಸಂಗೀತ ಶಿಬಿರದ ಉದ್ಘಾಟನೆಯಲ್ಲಿ ಅವರು ಮಾತನಾಡಿದರು.
ಸಂಗೀತ ಕಲಿಯುವುದರಿಂದ ಹಾಗೂ ಆಲಿಸುವುದರಿಂದ ಮನಸ್ಸಿಗೆ ಶಾಂತಿ,ಸಂತೋಷ ಸಿಗುತ್ತದೆ .ಸಂಗೀತ ಕಲಿಯುವುದರಲ್ಲಿ ಹಾಡನ್ನು ಗಾಯನ ಮಾಡುವುದು ಎಷ್ಟು ಮುಖ್ಯವೋ ಸಂಗೀತದ ಪರಿಕರಗಳ ಬಗ್ಗೆಯೂ ತಿಳಿಯುವುದು ಮುಖ್ಯ ಎಂದರು. ವಿದ್ಯಾರ್ಥಿಗಳು ಚಿಕ್ಕಂದಿನಿಂದಲೇ ಸಂಗೀತಾಭ್ಯಾಸದಲ್ಲಿ ತೊಡಗಿಕೊಂಡರೆ ಸುಲಭವಾಗಿ ಕಲಿಯಬಹುದಾಗಿದ್ದು ಪೋಷಕರು ತಮ್ಮ ಮಕ್ಕಳನ್ನು ಕೆಲ ಸಮಯ ಸಂಗೀತ ಶಾಲೆಗೆ ಕಳುಹಿಸುವಂತೆ ಮನವಿ ಮಾಡಿದರು.
ಸಂಗೀತಶಾಲೆಯ ಬಡಗಿರಾಮಣ್ಣ,ಸಂಗೀತ ಶಿಕ್ಷಕ ಶಂಕರ್,ವಿಪ್ರ ಸಂಘದ ಕಾರ್ಯದರ್ಶಿ ಹು.ಕೃ.ವಿಶ್ವನಾಥ್,ಆಂಜನೇಯಸ್ವಾಮಿ ಸಮಿತಿಯ ಧನಂಜಯ್,ಆಚಾರ್ ರಮೇಶಣ್ಣ,ತಮ್ಮಯ್ಯ, ಸ್ಟುಡಿಯೋ ಸುದರ್ಶನ್ ಸೇರಿದಂತೆ ಇತರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ