ಜಿಲ್ಲೆಯ ಗಡಿಭಾಗವಾಗಿರುವ ಹೋಬಳಿಯ ದಸೂಡಿ ಗ್ರಾಮದಲ್ಲಿ ಯಾವುದೇ ಲೈಸೆನ್ಸ್ ಪಡೆಯದೆ ಆಕ್ರಮವಾಗಿ ಮದ್ಯಮಾರಾಟ ನಡೆಯುತ್ತಿದ್ದು ಅಂತಹ ಅಂಗಡಿಗಳ ವಿರುದ್ದ ಕ್ರಮ ಕೈಗೊಂಡು, ಲೈಸನ್ಸ್ ಹೊಂದಿದವರಿಗೆ ಮದ್ಯದಂಗಡಿ ನಡೆಸಲು ಅನುಮತಿ ನೀಡುವಂತೆ ಇಲ್ಲಿನ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
![]() |
ಹುಳಿಯಾರು ಹೋಬಳಿ ದಸೂಡಿ ಗ್ರಾಮದಲ್ಲಿ ಲೈಸೆನ್ಸ್ ದಾರರಿಗೆ ಮದ್ಯದಂಗಡಿ ತೆರೆಯಲು ಅವಕಾಶ ನೀಡುವಂತೆ ಗ್ರಾಮಸ್ಥರು ಒತ್ತಾಯಿಸಿದರು.
ದಸೂಡಿ ಸೇರಿದಂತೆ ಸುತ್ತಮುತ್ತಲ ಹಳ್ಳಿಗಳಲ್ಲಿ ಹೆಚ್ಚುಜನ ರೈತರೇ ಆಗಿದ್ದು ದಿನನಿತ್ಯ ಮೈಮುರಿದು ದುಡಿಯುವಂತವರಾಗಿದ್ದು, ದಿನಪೂರ್ತಿಯ ಅಯಾಸವನ್ನು ಅವರು ಕಳೆದುಕೊಳ್ಳಬೇಕೆಂದರೆ ಮದ್ಯದ ಅವಶ್ಯಕತೆ ಅಗತ್ಯವಿದೆ. ಆದರೆ ತಮ್ಮ ಗ್ರಾಮದಲ್ಲಿ ಅಕ್ರಮವಾಗಿ ,ಕಲಬೆರಿಕೆ ಮದ್ಯವನ್ನು ತಮಗಿಷ್ಟ ಬಂದ ಹೆಚ್ಚಿನ ದರದಲ್ಲಿ ದಿನದ ೨೪ ಗಂಟೆಯೂ ಸಹ ಮಾರಾಟ ಮಾಡುತ್ತಿದ್ದಾರೆ. ಇಂತಹ ಹತ್ತನ್ನೆರಡು ಅಂಗಡಿಗಳು ಈ ಗ್ರಾಮದಲ್ಲಿದ್ದು ಇಲ್ಲಿನ ಬಡಜನರನ್ನು ಸುಲಿಗೆ ಮಾಡುತ್ತಿದ್ದಾರೆ ಇಂತಹ ಅಂಗಡಿದಾರರ ಮೇಲೆ ಕ್ರಮ ಕೈಗೊಂಡು ನಿಗದಿತ ದರದಲ್ಲಿ ಉತ್ತಮ ಮದ್ಯ ಮಾರಾಟ ಮಾಡುವ ಮದ್ಯಮಾರಾಟದ ಲೈಸನ್ಸ್ ಹೊಂದಿದವರಿಗೆ ಮದ್ಯದಂಗಡಿ ತೆರೆಯಲು ಅವಕಾಶ ಕೊಟ್ಟು ಇಲ್ಲಿನ ಜನರಿಗೆ ಉತ್ತಮ ಮದ್ಯ ದೊರೆಯುವಂತೆ ಮಾಡಿ ಎಂದು ಮಾಜಿ ಗ್ರಾ.ಪಂ.ಅಧ್ಯಕ್ಷ ರಂಗಧಾಮಯ್ಯ ಇಲಾಖೆಯವರಲ್ಲಿ ಮನವಿ ಮಾಡಿದ್ದಾರೆ.
ಈ ಬಗ್ಗೆ ಗ್ರಾಮದ ಬಹುಪಾಲು ಮಂದಿ ಜನರೂ ಸಹಮತ ವ್ಯಕ್ತಪಡಿಸಿದ್ದು, ಅಕ್ರಮವಾಗಿ ತಲೆಯೆತ್ತಿರುವ ಮದ್ಯದಂಗಡಿಗಳ ಬದಲಾಗಿ ಮದ್ಯ ಮಾರಾಟದ ಲೈಸೆನ್ಸ್ ಪಡೆದವರಿಗೆ ಮದ್ಯದಂಗಡಿ ನಡೆಸಲು ಅನುಮತಿ ನೀಡುವಂತೆ ಅಬಕಾರಿ ಇಲಾಖೆಯನ್ನು ಒತ್ತಾಯಿಸಿ, ಅಬಕಾರಿ ಡಿಸಿಯವರಿಗೆ ಮನವಿ ಪತ್ರ ಸಹ ನೀಡಿದ್ದೇವೆ. ಈ ಬಗ್ಗೆ ಹಿಂದೆ ಹಲವು ಬಾರಿ ಇಲಾಖೆಯ ಗಮನಕ್ಕೆ ತಂದು ಮನವಿಯನ್ನು ಸಲ್ಲಿಸಿದ್ದರೂ ಯಾವುದೇ ಪ್ರಯೋಜವಾಗಿಲ್ಲ, ಇಲ್ಲಿ ಆಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ವಿಷಯ ತಿಳಿದಿದ್ದರೂ ಸಹ ಇಲಾಖೆಯವರೂ ಮೌನವಹಿಸಿರುವುದನ್ನು ನೋಡಿದರೆ ಮದ್ಯಮಾರಾಟದಾರರೊಂದಿಗೆ ಇಲಾಖೆ ಶಾಮಿಲ್ ಆಗಿರುವ ಸಂಶಯ ಮೂಡುವಂತೆ ಮಾಡಿದೆ. ಇನ್ನಾದರೂ ಇಲಾಖೆ ಈ ಬಗ್ಗೆ ಕ್ರಮ ಕೈಗೊಂಡು ಅನಧಿಕೃತವಾಗಿ ಮದ್ಯಮಾರಾಟ ಮಾಡುತ್ತಿರುವವರ ವಿರುದ್ದ ಶಿಸ್ತುಕ್ರಮ ಜರುಗಿಸಿ ಲೈಸೆನ್ಸ್ ಹೊಂದಿದವರಿಗೆ ಮದ್ಯದಂಗಡಿ ತೆರೆಯಲು ಅವಕಾಶ ಮಾಡಿಕೊಟ್ಟರೆ ಇಲ್ಲಿನ ಜನಕ್ಕೆ ಅನುಕೂಲವಾಗಲಿದೆ ಎನ್ನುತ್ತಾರೆ ಇಲ್ಲಿನ ಸ್ಥಳೀಯರು.
ನಮಗೆ ಮದ್ಯದಂಗಡಿ ಬೇಕು ಅದಕ್ಕೆ ಲೈಸೆನ್ಸ್ ಹೊಂದಿದವರಿಗೆ ಮದ್ಯದಂಗಡಿ ತೆರೆಯಲು ಅವಕಾಶ ಕೊಡುವಂತೆ ಗ್ರಾಮಸ್ಥರಾದ ಕಾಂತರಾಜು, ಆರ್.ಜ್ಞಾನಮೂರ್ತಿ,ತ್ಯಾಗರಾಜು,ಅಂಗಡಿ ಮೂರ್ತಣ್ಣಶೆಟ್ಟಿ,ಗಿರೀಶ್ ಶೆಟ್ಟಿ,ಅನಿಲ್ ಕುಮಾರ್, ಪಾಂಡುರಂಗಯ್ಯ, ಸುರೇಶ್,ಕುಮಾರನಾಯ್ಕ,ರಾಮಲಿಂಗಯ್ಯ,ಪುಟ್ಟಯ್ಯ,ಹನುಮಂತಯ್ಯ, ರಂಗನಾಥ, ಜನಾರ್ಧನ್, ರವಿಕುಮಾರ್,ಜೈರಾಮಯ್ಯ, ಶಿವು,ಓಂಕಾರ,ಶ್ರೀನಿವಾಸ, ಲಾಲಾನಾಯ್ಕ,ಕರಿಯಪ್ಪ,ಗವಿರಂಗಯ್ಯ ಸೇರಿದಂತೆ ಇತರರು ಒತ್ತಾಯಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ