ಹುಳಿಯಾರು ಸಮೀಪದ ತೊರೆಸೂರಗೊಂಡನಹಳ್ಳಿಯ ಶ್ರೀಬಸವೇಶ್ವರಸ್ವಾಮಿ ಹಾಗೂ ಶ್ರೀಚೌಡಮ್ಮನವರ ಜಾತ್ರಾಮಹೋತ್ಸವದ ಅಂಗವಾಗಿ ಸ್ವಾಮಿಯ ಬ್ರಹ್ಮ ರಥೋತ್ಸವ ಅಪಾರ ಸಂಖ್ಯೆಯ ಭಕ್ತರ ಶ್ರದ್ಧಾಭಕ್ತಿಯಲ್ಲಿ ಸೋಮವಾರ ಮಧ್ಯಾಹ್ನ ಜರುಗಿತು.
![]() |
ಹುಳಿಯಾರು ಸಮೀಪದ ತೊರೆಸೂರಗೊಂಡನಹಳ್ಳಿಯ ಶ್ರೀಬಸವೇಶ್ವರಸ್ವಾಮಿಯ ಹಾಗೂ ಶ್ರೀಚೌಡಮ್ಮನವರ ಅಗ್ನಿಕೊಂಡ ಸೇವೆ ಸೋಮವಾರ ನಡೆಯಿತು. |
![]() |
ಹುಳಿಯಾರು ಸಮೀಪದ ತೊರೆಸೂರಗೊಂಡನಹಳ್ಳಿಯ ಶ್ರೀಬಸವೇಶ್ವರಸ್ವಾಮಿಯ ಬ್ರಹ್ಮ ರಥೋತ್ಸವ ಭಕ್ತಾಧಿಗಳ ಶ್ರದ್ಧಾಭಕ್ತಿಯಲ್ಲಿ ಸೋಮವಾರ ಜರುಗಿತು. |
ರಥೋತ್ಸವದ ಅಂಗವಾಗಿ ಸೋಮವಾರ ಬೆಳಿಗ್ಗೆನಿಂದಲೇ ಗ್ರಾಮಸ್ಥರೆಲ್ಲಾ ಸೇರಿ ರಥವನ್ನು ವಿವಿಧ ಹೂಹಾರ, ಬಣ್ಣಬಣ್ಣದ ಭಾವುಟಗಳಿಂದ ಅಲಂಕರಿಸಿದ್ದರಲ್ಲದೆ, ಸ್ವಾಮಿಯ ಮೂಲಸ್ಥಾನದಲ್ಲಿ ದರ್ಬಾರ್ ಅಲಂಕಾರ ಮಾಡಿದ್ದರು. ನಂತರ ಹೊಳೆಸೇವೆಯ ಹಾಗೂ ಅಗ್ನಿಕೊಂಡಸೇವೆ ನಡೆಯಿತು. ಅಗ್ನಿಕೊಂಡದ ನಂತರ ಸ್ವಾಮಿ ಹಾಗೂ ದೇವಿಯನ್ನು ನಡೆಮುಡಿಯಲ್ಲಿ ದೇವಾಲಯದಲ್ಲಿಗೆ ಕರೆದೊಯ್ದು ಪೂಜೆಸಲ್ಲಿಸಲಾಯಿತು. ಬಸವಣ್ಣನ ಗದ್ದಿಗೆಯಲ್ಲಿ ಪೂಜೆ ನಡೆದು ಪಾನಕವಿತರಿಸಿ, ಅಲಂಕೃತ ರಥದಲ್ಲಿಗೆ ಆಗಮಿಸಿದ ಸ್ವಾಮಿಯನ್ನು ಭಕ್ತರು ಜೈಕಾರ ಹಾಕುತ್ತಾ ರಥಕ್ಕೇರಿಸಿದರು. ಚೌಡಮ್ಮದೇವಿ ರಥಕ್ಕೆ ಭೇಟಿ ನೀಡಿ ಈಡುಗಾಯಿ ಹೊಡೆಯುವ ಮೂಲಕ ರಥ ಎಳೆಯಲಾಯಿತು. ಗ್ರಾಮಸ್ಥರು, ನೆಂಟರಿಷ್ಟರೆಲ್ಲಾ ಸೇರಿ ಸ್ವಾಮಿಯ ರಥವನ್ನೆಳೆದು ಸಂಭ್ರಮಿಸಿದರು. ರಥದ ಮೇಲಿದ್ದ ಸ್ವಾಮಿಗೆ ಮಹಿಳೆಯರು ಹಣ್ಣುಕಾಯಿ ಮಾಡಿಸುವ ಮೂಲಕ ಸ್ವಾಮಿಗೆ ನಮಸ್ಕರಿಸಿ ಆಶೀರ್ವಾದ ಪಡೆಯುತ್ತಿದ್ದರು. ರಥೋತ್ಸವದ ನಂತರ ಪಾನಕ,ಪನಿವಾರ ವಿತರಣೆ ಹಾಗೂ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಈ ವೇಳೆ ಟಿ.ಎಸ್.ಹಳ್ಳಿ ಸೇರಿದಂತೆ ಸುತ್ತಮುತ್ತಲ ಹಳ್ಳಿಯವರು ಅಲಂಕೃತ ಬಸವೇಶ್ವಸ್ವಾಮಿ ಹಾಗೂ ಚೌಡಮ್ಮನ ದರ್ಶನ ಪಡೆದರು. ದೇವಾಲಯ ಸಮಿಯವರು ಸೇರಿದಂತೆ ನೂರಾರು ಸಂಖ್ಯೆಯ ಭಕ್ತಾಧಿಗಳು ಆಗಮಿಸಿದ್ದರು. ಸಂಜೆ ಸ್ವಾಮಿಯ ಅಡ್ಡಪಲ್ಲಕ್ಕಿ ಉತ್ಸವ ,ಬಸವೇಶ್ವರ ಭಜನಾ ಮಂಡಳಿಯವರಿಂದ ಭಜನಾಕಾರ್ಯ ಹಾಗೂ ಚೌಡೇಶ್ವರಿ ಅಮ್ಮನ ಮಧುವಣಗಿತ್ತಿ ಕಾರ್ಯ ನಡೆಯಿತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ