ಹುಳಿಯಾರು ಪಟ್ಟಣದ ಆರ್ಯವೈಶ್ಯ ಮಂಡಳಿ, ಮಹಿಳಾ ಸಂಘ, ವಾಸವಿ ವಿದ್ಯಾಸಂಸ್ಥೆ, ವಾಸವಿ ಯುವಜನ ಸಂಘ ಹಾಗೂ ಕನ್ನಿಕಾಪರಮೇಶ್ವರಿ ಸಹಕಾರ ಸಂಘದವತಿಯಿಂದ ವಾಸವಿ ಜಯಂತಿ ಹಾಗೂ ಶ್ರೀಕನ್ನಿಕಾಪರಮೇಶ್ವರಿ ದೇವಿಯ ೨೪ ನೇ ವಾರ್ಷಿಕೋತ್ಸವ ಮಂಗಳವಾರ ವೈಭವಯುತವಾಗಿ ನಡೆಯಿತು.
ಹುಳಿಯಾರಿನಲ್ಲಿ ವಾಸವಿ ಜಯಂತಿ ಅಂಗವಾಗಿ ಶ್ರೀಕನ್ನಿಕಾಪರಮೇಶ್ವರಿ ದೇವಿಯ ರಾಜಬೀದಿ ಉತ್ಸವ ನಡೆಸಲಾಯಿತು. |
ಮುಂಜಾನೆಯಿಂದಲೇ ವಿವಿಧ ಪೂಜಾ ಕೈಂಕರ್ಯಗಳು ಪ್ರಾರಂಭಗೊಂಡು ಕನ್ನಿಕಾಪರಮೇಶ್ವರಿದೇವಿಗೆ ಹಾಲಿನ ಪಂಚಾಮೃತಾಭಿಷೇಕ,ಸುಮಂಗಲಿಯರಿಂದ ಆರತಿಸೇವೆ, ಕನ್ಯಕಾ ಬಾಲನಗರು ಪೂಜೆ ನಡೆದ ನಂತರ ತಂಬಿಟ್ಟಿನ ಆರತಿ ಸ್ಪರ್ಧೆ, ವೇಷಭೂಷಣ ಸ್ಪರ್ಧೆ ನಡೆಸಲಾಯಿತು. ಜಯಂತಿ ಅಂಗವಾಗಿ ಪಟ್ಟಣದ ಬಸ್ ನಿಲ್ದಾಣದಲ್ಲಿ ಮಧ್ಯಾಹ್ನ ಸಾರ್ವಜನಿಕರಿಗೆ ಉಪಹಾರ ವಿತರಿಸಿದರು. ಸಂಜೆ ವಿದ್ಯುತ್ ದೀಪಾಲಂಕೃತ ಮಂಟಪದಲ್ಲಿ ಅಮ್ಮನವರನ್ನು ಕುಳ್ಳಿರಿಸಿ ಪಟ್ಟಣದ ರಾಜಬೀದಿಗಳಲ್ಲಿ ಉತ್ಸವ ನಡೆಸಲಾಯಿತು.
ಈ ವೇಳೆ ಆರ್ಯವೈಶ್ಯ ಮಂಡಳಿಯ ಅಧ್ಯಕ್ಷ ನಟರಾಜ್ ಗುಪ್ತ, ಚಂದ್ರಶೇಖರ್, ನಾಗರಾಜು,ರಾಮಮೂರ್ತಿ,ಪ್ರದೀಪ್,ನಾಗೇಶ್,ಶ್ರೀನಿವಾಸ ಶೆಟ್ರು,ಶ್ರೀನಿವಾಸ್,ರಾಮನಾಥ್,ರಮಾಕಾಂತ್ ಸೇರಿದಂತೆ ಇತರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ