ರಾಜ್ಯಾದ್ಯಂತ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯುತ್ತಿದ್ದು ಬುಧವಾರ ನಡೆದ ವಿಜ್ಞಾನ ಪರೀಕ್ಷೆ ಬರೆದ ವಿದ್ಯಾರ್ಥಿಗಳಲ್ಲಿ ಉತ್ಸಾಹ ಕಂಡುಬಂದಿದ್ದಲ್ಲದೆ ಈ ಬಾರಿ ಹೆಚ್ಚಿನ ಅಂಕದ ನಿರೀಕ್ಷೆ ಪರೀಕ್ಷಾ ಕೇಂದ್ರದಿಂದ ಹೊರಬಂದ ವಿದ್ಯಾರ್ಥಿಗಳಲ್ಲಿ ಕಂಡುಬಂತು.
ಹುಳಿಯಾರಿನ ಟಿ.ಆರ್.ಎಸ್.ಆರ್ ಪರೀಕ್ಷಾ ಕೇಂದ್ರದಿಂದ ವಿಜ್ಞಾನ ಪರೀಕ್ಷೆ ಬರೆದು ಹೊರಬರುತ್ತಿರುವ ವಿದ್ಯಾರ್ಥಿಗಳು. |
ಕಳೆದ ಬಾರಿಗಿಂತ ಈ ಸಲದ ಪ್ರಶ್ನೆ ಪತ್ರಿಕೆ ಸುಲಭವಾಗಿತ್ತು ಕೆಲ ಪ್ರಶ್ನೆಗಳು ಕ್ಲಿಷ್ಟವಾಗಿದ್ದು ಬಿಟ್ಟರೆ ಉಳಿದ ಪ್ರಶ್ನೆಗಳೆಲ್ಲಾ ಸುಲಭವಾಗಿ ಉತ್ತರಿಸುವಂತವಾಗಿದ್ದವು ೮೦ ಅಂಕಕ್ಕೆ ೬೫ ರಿಂದ ೭೦ ಅಂಕ ಬರುತ್ತವೆ ಎಂದು ವಿದ್ಯಾರ್ಥಿ ಪ್ರಮೋದ್ ತಿಳಿಸಿದರು.
ಟಿ.ಆರ್.ಎಸ್.ಆರ್.ಶಾಲೆಯ ಪರೀಕ್ಷಾಕೇಂದ್ರದಲ್ಲಿ ಒಟ್ಟು ೨೪೦ ವಿದ್ಯಾರ್ಥಿಗಳ ಪೈಕಿ ೧೯೮ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ ಪರೀಕ್ಷೆ ಬರೆದಿದ್ದು, ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಪ್ರತಿ ಕೊಠಡಿಯನ್ನು ಸೂಕ್ಷ್ಮವಾಗಿ ಗಮನಿಸಿದ್ದು, ವಿದ್ಯಾರ್ಥಿಗಳು ಉತ್ಸಾಹದಿಂದ ಪರೀಕ್ಷೆ ಬರೆದಿರುವುದಾಗಿ ಪರೀಕ್ಷಾಕೇಂದ್ರದ ಮೇಲ್ವಿಚಾರಕ ರಮೇಶ್ ತಿಳಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ