ಗ್ರಾಮೀಣ ಪ್ರದೇಶದಲ್ಲಿ ಶಿರಡಿ ಟ್ರಸ್ಟ್ ‘ಾರ್ಮಿಕ,ಸಾಮಾಜಿಕ,ಆರೋಗ್ಯ ಸೇರಿದಂತೆ ಇತರ ಜನಪರ ಯೋಜನೆಗಳನ್ನು ರೂಪಿಸುತ್ತಿರುವುದು ಶ್ಲಾಘನೀಯ ಎಂದು ಸಂಸದ ಎಸ್.ಪಿ.ಮುದ್ದಹನುಮೇಗೌಡ ಮೆಚ್ಚುಗೆ ವ್ಯಕ್ತಪಡಿಸಿದರು.
ಬೋರನಕಣಿವೆ ಬಳಿಯ ಶಿರಿಡಿ ಸಾಯಿಬಾಬಾ ಇಂರ್ಟ ನ್ಯಾಷನಲ್ ಟ್ರಸ್ಟ್ ವತಿಯಿಂದ ‘ಾನುವಾರ ಏರ್ಪಡಿಸಿದ್ದ ಆರೋಗ್ಯ ಚೇತನ ಕಾರ್ಯಕ್ರಮದಡಿ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು ಮುಂದೆ ಇಲ್ಲಿ ನಡೆಯುವ ಯಾವುದೇ ಕಾರ್ಯಗಳಿಗೆ ಬೆಂಬಲ ನೀಡುವುದಾಗಿ ‘ರವಸೆ ನೀಡಿದರು.ಸಾಮಾಜಿಕ ಹಾಗೂ ಶೈಕ್ಷಣಿಕ ಕಾರ್ಯಗಳಿಗೆ ತಮ್ಮ ನೆರವಿನ ಹಸ್ತ ಸದಾಯಿರುತ್ತದೆಂದರು
ಹುಳಿಯಾರು ಹೋಬಳಿ ಬೋರನಕಣಿವೆ ಬಳಿಯ ಶಿರಿಡಿ ಸಾಯಿಬಾಬಾ ಇಂರ್ಟ ನ್ಯಾಷನಲ್ ಟ್ರಸ್ಟ್ ವತಿಯಿಂದ ‘ಾನುವಾರ ಏರ್ಪಡಿಸಿದ್ದ ಆರೋಗ್ಯ ಚೇತನ ಕಾರ್ಯಕ್ರಮವನ್ನು ಸಂಸದ ಎಸ್.ಪಿ.ಮುದ್ದಹನುಮೇಗೌಡ ಉದ್ಘಾಟಿಸಿದರು. ಮುಖಂಡರಾದ ದೇವೇಂದ್ರ, ದಸೂಡಿ ರಂಗಸ್ವಾಮಿ,ಸಾಸಲು ಸತೀಶ್,ರುದ್ರೇಶ್, ವೆಂಕಟೇಶ್, ಶೇಷಾನಾಯ್ಕ, ಶ್ರೀನಿವಾಸಮೂರ್ತಿ ಮುಂತಾದವರಿದ್ದರು.
|
ಪ್ರಸ್ತುತ ಸನ್ನಿವೇಶದಲ್ಲಿ ನೀರಿನ ವಿಷಯ ಸೂಕ್ಷ್ಮವಾಗಿದ್ದು ಎಲ್ಲರಲ್ಲೂ ಬದ್ಧತೆ ಪ್ರದರ್ಶನ ಬಹು ಮುಖ್ಯವಾಗಿದೆ ಎಂದರು. ಕರ್ನಾಟಕ ಹಾಗೂ ತಮಿಳುನಾಡುವಿನಲ್ಲಿ ವಿವಾದಕ್ಕೆ ಕಾರಣವಾಗಿರುವ ಮೇಕೆದಾಟು ಯೋಜನೆ ಬಗ್ಗೆ ಪ್ರಸ್ತಾಪಿಸಿದ ಅವರು ಕರ್ನಾಟಕದಿಂದ ಹೆಚ್ಚುವರಿಯಾಗಿ ಹರಿದು ವ್ಯರ್ಥವಾಗಿ ಸಮುದ್ರ ಸೇರುವ ನೀರನ್ನು ತಡಗಟ್ಟಿ ಬಳಕೆ ಮಾಡಿಕೊಳ್ಳಲು ತಮಿಳುನಾಡು ತಗಾದೆ ತೆಗೆಯುತ್ತಿರುವುದರಲ್ಲಿ ಅರ್ಥವಿಲ್ಲ. ಈ ಬಗ್ಗೆ ಸಂಸತ್ತಿನಲ್ಲಿ ಹೋರಾಟ ಮಾಡುವುದಾಗಿ ತಿಳಿಸಿದರು.
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸ‘ೆಯಲ್ಲಿ ಪ್ರ‘ಾನಿ ಸೇರಿದಂತೆ ವಿವಿ‘ ಸಚಿವರು ‘ಾಗವಹಿಸಿದ್ದ ವೇಳೆ ರಾಜ್ಯಗಳಲ್ಲಿ ಮೇಕೆದಾಟು ಯೋಜನೆಯ ವಿವಾದವನ್ನು ಬಗೆಹರಿಸಿ ಎಂಬ ನನ್ನ ಮನವಿಗೆ ಅವರು ಕಿವಿಗೊಡಲಿಲ್ಲ ಎಂದು ವಿಷಾದಿಸಿದರು.
ಕಾಂಗ್ರೆಸ್ ಮುಖಂಡ ಸಾಸಲು ಸತೀಶ್, ಡಾ.ರಮೇಶ್ ಬಾಬು ಮಾತನಾಡಿದರು. ವೈದ್ಯರಾದ ರಮೇಶ್ ಬಾಬು, ಸ್ಮಿತಾ ರಮೇಶ್ ಬಾಬು, ಅಜಯ್ ಕುರ್ಮಾ ಅವರುಗಳ ತಂಡ ಕ್ಯಾರ್ನ್ಸ ರೋಗದ ಬಗ್ಗೆ ತಪಾಸಣೆ ನಡೆಸಿದರು. ಶಿರಿಡಿ ಟ್ರಷ್ಟ್ ಕಾರ್ಯದರ್ಶಿ ವಿಠಲ್ ಸ್ವಾಗತಿಸಿ, ಶ್ರೀನಿವಾಸಮೂರ್ತಿ ವಂದಿಸಿದರು. ಟ್ರಸ್ಟ್ ಆರೋಗ್ಯ ಚೇತನ ಸಂಚಾಲಕ ದೇವೇಂದ್ರ ಪ್ರಸ್ತಾವಿಕವಾಗಿ ಮಾತನಾಡಿದರು.
ತಾ.ಪಂ ಸದಸ್ಯೆ ಕವಿತಾ, ಎಪಿಎಂಸಿ ನಿರ್ದೇಶಕರಾದ ಯಳನಡು ಸಿದ್ದರಾಮಯ್ಯ, ಡಿ.ರ್ಆ.ರುದ್ರೇಶ್, ಹುಳಿಯಾರು ಬ್ಲಾಕ್ ಕಾಂಗ್ರೆಸ್ ಅ‘್ಯಕ್ಷ ಕೆ.ಜಿ.ವೆಂಕಟೇಶ್, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಶೇಷಾನಾಯ್ಕ, ಪಿಎಲ್ ಡಿ ಬ್ಯಾಂಕ್ ನಿರ್ದೇಶಕರಾದ ಕೆ.ಸಿ.ಶಿವಕುರ್ಮಾ, ಬೆಳ್ಳಾರದ ಈರಯ್ಯ, ಬರ್ಗ ಹುಕುಂ ಸಮಿತಿ ಸದಸ್ಯ ಅಶೋಕ್, ತಾಲ್ಲೂಕು ಶಿಕ್ಷಕರ ಸಂಘದ ಅ‘್ಯಕ್ಷ ಹೊಯ್ಸಳಕಟ್ಟೆ ಪ್ರಕಾಶ್, ತಾಲ್ಲೂಕು ಒಕ್ಕಲಿಗರ ಸಂಘದ ಕಾರ್ಯದರ್ಶಿ ರಾಜಣ್ಣ, ಮಾಜಿ ಜಿ.ಪಂ ಸದಸ್ಯ ರಾಮಚಂದ್ರಯ್ಯ, ಮಾಜಿ ತಾಲ್ಲೂಕ್ ಬೋರ್ಡ್ ಸದಸ್ಯ ದಸೂಡಿ ರಂಗಸ್ವಾಮಿ ಇತರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ