ಸಂಗಿತಾಭ್ಯಾಸ ಮಾಡುವುದರಿಂದ ಮನಸ್ಸಿಗೆ ಶಾಂತಿ ಲಭಿಸುವುದಲ್ಲದೆ ಮನಸ್ಸಿನ ಏಕಾಗ್ರತೆಗೆ ಸಂಗೀತಾಸ್ವಾದನೆ ನೆರವಾಗಲಿದೆ ಎಂದು ಸಂಗೀತ ಶಿಕ್ಷಕ ಶಂಕರ್ ತಿಳಿಸಿದರು.
ಹುಳಿಯಾರಿನ ಶ್ರೀ ಮಾರುತಿ ಸಂಗೀತ ಶಾಲೆವತಿಯಿಂದ ಗಾಂಧಿಭವನದಲ್ಲಿ ಹತ್ತು ದಿನಗಳಕಾಲ ಅಯೋಜಿಸಿದ್ದ ಉಚಿತ ಸಂಗೀತ ಶಿಬಿರ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಹುಳಿಯಾರಿನ ಶ್ರೀಮಾರುತಿ ಸಂಗೀತ ಶಾಲೆ ವತಿಯಿಂದ ಗಾಂಧಿಭವನದಲ್ಲಿ ಅಯೋಜಿಸಿದ್ದ ಉಚಿತ ಸಂಗೀತ ಶಿಬಿರ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಸಂಗೀತ ಶಿಕ್ಷಕ ಶಂಕರ್ ಮಾತನಾಡಿದರು.
|
ಸಂಗೀತ ಕಲಿಯುಲು ಅನೇಕ ಅವಕಾಶಗಳಿದ್ದು ಅವುಗಳನ್ನು ವಿದ್ಯಾರ್ಥಿಗಳು ಬಳಸಿಕೊಳ್ಳಬೇಕು , ಸಂಗೀತದಲ್ಲಿ ಹೆಚ್ಚಿನ ವಿದ್ವತ್ ಪಡೆಯುವವರಿಗಾಗಿ ಸಂಗೀತ ಶಾಲೆಗಳಿರುವುದಾಗಿ ತಿಳಿಸಿದರು. ಶಿಬಿರಕ್ಕೆ ಬರುವ ಪಟ್ಟಣದ ವಿದ್ಯಾರ್ಥಿಗಳಲ್ಲಿ ಸಂಗೀತದ ಬಗ್ಗೆ ಆಸಕ್ತಿಯಿದ್ದು ನಿರಂತರ ಅಭ್ಯಾಸ ಮಾಡುವಂತೆ ತಿಳಿಸಿದರು. ಪೋಷಕರು ತಮ್ಮ ಮಕ್ಕಳನ್ನು ಸಂಗೀತ ಶಾಲೆಗೆ ಕಳುಹಿಸುವ ಮೂಲಕ ಮಕ್ಕಳಲ್ಲಿ ಅಡಕವಾಗಿರುವ ಪ್ರತಿಭೆಯನ್ನು ಹೊರತರಲು ಸಹಕಾರಿಯಗುವಂತೆ ತಿಳಿಸಿದರು.
ಹುಳಿಯಾರಿನ ಶ್ರೀಮಾರುತಿ ಸಂಗೀತ ಶಾಲೆ ವತಿಯಿಂದ ಗಾಂಧಿಭವನದಲ್ಲಿ ಅಯೋಜಿಸಿದ್ದ ಉಚಿತ ಸಂಗೀತ ಶಿಬಿರದಲ್ಲಿ ಪಾಲ್ಗೊಂಡಿದ್ದ ಶಿಬಿರಾರ್ಥಿಗಳು. |
ಶ್ರೀಮಾರುತಿ ಸಂಗೀತ ಶಾಲೆಯ ಬಡಗಿ ರಾಮಣ್ಣ ಮಾತನಾಡಿ, ಸಂಗೀತ ಶಾಲೆ ಪ್ರಾರಂಭದಲ್ಲಿ ಕೆಲ ಮಂದಿ ಮಾತ್ರ ಬರುತ್ತಿದ್ದರು. ಆದರೆ ಇದೀಗ ಹೆಚ್ಚು ಮಕ್ಕಳು ಬರುತ್ತಿದ್ದು ಶಿಕ್ಷಕ ಶಂಕರ್ ಅವರು ಯಾವುದೇ ಸಂಭಾವನೆಯನ್ನು ಪಡೆಯದೆ ಮಕ್ಕಳಿಗೆ ಸಂಗೀತ ಕಲಿಸುವುದನ್ನೇ ಗುರಿಯಾಗಿಟ್ಟುಕೊಂಡು ಸಂಗಿತ ತರಗತಿಗಳನ್ನು ನಡೆಸುತ್ತಿರುವುದು ಶ್ಲಾಘನೀಯ ಎಂದರು.
ಈ ವೇಳೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ವೆಂಕಟಾಛಲಪತಿ ಶೆಟ್ರು, ಮೀಸೆ ರಂಗಪ್ಪ, ಆಚಾರ್ ರಮೇಶಣ್ಣ, ದಾಸಪ್ಪ, ಶಿವಣ್ಣ, ತಮ್ಮಯ್ಯ, ಮುಖಂಡರಾದ ನಂದಿಹಳ್ಳಿಶಿವಣ್ಣ, ಜಲಾಲ್ ಸಾಬ್, ತಬಲವಾದಕ ರಮೇಶ್, ಸತೀಶ್, ಉಪನ್ಯಾಸಕ ಶಶಿಭೂಷಣ್ ಸೇರಿದಂತೆ ಇತರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ