ವಿದ್ಯುತ್ ಶಾರ್ಟ್ ಸಕ್ಯೂಟ್ ನಿಂದಾಗಿ ತಾವಿದ್ದ ವಸತಿಗೃಹದಲ್ಲಿ ಬೆಂಕಿ ಕಾಣಿಸಿಕೊಂಡು ಟಿವಿ ಹಾಗೂ ಕೆಲವು ದಾಖಲೆಗಳು ಸುಟ್ಟು ಹೋಗಿದೆ ಎಂದು ಆರೋಗ್ಯ ಸಹಾಯಕಿ ಗುಂಡಮ್ಮ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಂದಿಕೆರೆ ಹೋಬಳಿಯ ಬಡಕೇಗುಡ್ಲು ಗ್ರಾಮದ ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ಗುಂಡಮ್ಮನವರು ವಾಸವಿರುವ ಎ.ಎನ್.ಎಮ್ ವಸತಿ ಗೃಹದಲ್ಲಿ ದುರ್ಘಟನೆ ನಡೆದಿದ್ದು. ಆ ಹೊತ್ತಿನಲ್ಲಿ ತಾವು ಊರಿಗೆ ತೆರಳಿದಿದ್ದಾಗಿ ದೂರಿನಲ್ಲಿ ಹೇಳಿದ್ದಾರೆ. ಗ್ರಾಮದವರು ಮಾತ್ರ ಇದು ಈಕೆಯೆ ಬೇಜವಬ್ದಾರಿಯಿಂದ ಘಟಿಸಿದೆ ಎಂದು ದೂರುತ್ತಾರೆ. ವಸತಿ ಗೃಹದಲ್ಲಿನ ಟಿವಿಯನ್ನು ಆಫ್ ಮಾಡದೆ ತೆರಳಿ ಎರಡು ಮೂರು ದಿನ ನಿರಂತರವಾಗಿ ಆನಾಗಿದ್ದ ಟಿವಿ ಬಿಸಿಯಾಗಿ ಈ ಘಟನೆಗೆ ಕಾರಣ ಎನ್ನುತ್ತಾರೆ.
ಕಿಟಕಿಯಿಂದ ಹೊಗೆ ಬಂದಿದ್ದನ್ನು ಗಮನಿಸಿ ಬೀಗ ಹೊಡೆದು ಬಾಗಿಲು ತೆರೆದಾಗ ಘಟನೆ ಬೆಳಕಿಗೆ ಬಂದಿದೆ. ಘಟನೆ ಬಗ್ಗೆ ಗ್ರಾಮಸ್ಥರು ಆರೋಗ್ಯ ಸಹಾಯಕಿಯನ್ನು ತರಾಟೆಗೆ ತೆಗೆದುಕೊಂಡಿದ್ದು, ಸರಿಯಾಗಿ ಕಾರ್ಯ ನಿರ್ವಹಿಸುವಂತೆ ತಾಕೀತು ಮಾಡಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ