ಹುಳಿಯಾರು ಹೋಬಳಿಯ ಜೋಡಿತಿರುಮಲಾಪುರದ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತವಾಗಿ ಬಟ್ಟೆ ವಿತರಿಸುವ ಮೂಲಕ ಟಿ.ಎಸ್.ಲಕ್ಷ್ಮಿನರಸಿಂಹಮೂರ್ತಿ ಅವರು ತಮ್ಮ ೮೦ನೇ ವರ್ಷ ಹುಟ್ಟುಹಬ್ಬವನ್ನು ಬುಧವಾರ ಆಚರಿಸಿಕೊಂಡರು.
ಮಕ್ಕಳಿಗೆ ಬಟ್ಟೆವಿತರಿಸಿ ಮಾತನಾಡಿದ ಅವರು, ಇಂದಿನ ದಿನದಲ್ಲಿ ಹುಟ್ಟು
ಹಬ್ಬದ ಹೆಸರಿನಲ್ಲಿ ಸಾವಿರಾರು ರೂಪಾಯಿ ವ್ಯರ್ಥವಾಗಿ ಖರ್ಚು ಮಾಡುತ್ತಾರೆ ಅದರ ಬದಲು ಅದೇ ಹಣವನ್ನು ಸಾರ್ವಜನಿಕ ಕೆಲಸಗಳಿಗೆ ಬಳಸುವುದು ಉತ್ತಮ ಎಂದರು. ಜೀವನದಲ್ಲಿ ನಾವು ವರ್ಷಪೂರ್ತಿ ದುಡಿಯುತ್ತಿರುತ್ತೇವೆ ಆದರೆ ನಾವು ದುಡಿದು ಬಂದಿದ್ದರಲ್ಲೇ ಸ್ವಲ್ಪಹಣದಲ್ಲಿ ಬಟ್ಟೆ,ಪುಸ್ತಕ,ಬ್ಯಾಗ್ ಸೇರಿದಂತೆ ಇನ್ನಿತರ ವಸ್ತುಗಳನ್ನು ಶಾಲಾಮಕ್ಕಳಿಗೆ ನೀಡುವುದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವುದರ ಜೊತೆಗೆ ಮಕ್ಕಳು ಸಹ ತಮ್ಮ ಮುಂದಿನ ದಿನದಲ್ಲಿ ಇಂತಹ ಕಾರ್ಯಗಳನ್ನು ಮಾಡುವಂತೆ ಪ್ರೇರೇಪಿಸಬಹುದಾಗಿದೆ ಎಂದರು.
ಹುಳಿಯಾರು ಹೋಬಳಿ ಜೋಡಿತಿರುಮಲಾಪುರದ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತವಾಗಿ ಬಟ್ಟೆ ವಿತರಿಸುವ ಮೂಲಕ ಟಿ.ಎಸ್.ಲಕ್ಷ್ಮಿನರಸಿಂಹಮೂರ್ತಿ ಅವರು ತಮ್ಮ ೮೦ನೇ ವರ್ಷ ಹುಟ್ಟುಹಬ್ಬವನ್ನು ಬುಧವಾರ ಆಚರಿಸಿಕೊಂಡರು. |
ಈ ವೇಳೆ ಮುಖ್ಯಶಿಕ್ಷಕ ಚಂದ್ರಪ್ಪ, ಶಿಕ್ಷಕಿ ಲಕ್ಕಮ್ಮ, ಎಸ್ಡಿಎಂಸಿ ಅಧ್ಯಕ್ಷ ಮಂಜುನಾಥ್,ಉಪಾಧ್ಯಕ್ಷ ರಾಜಣ್ಣ, ಟಿ.ಎಸ್.ಲಕ್ಷ್ಮಿನರಸಿಂಹಮೂರ್ತಿ ಅವರ ಮಕ್ಕಳಾದ ನಂಜುಂಡರಾವ್, ಸತ್ಯನಾರಾಯಣ, ರಾಘವೇಂದ್ರ, ಗ್ರಾ.ಪಂ.ಸದಸ್ಯೆ ರತ್ಮಮ್ಮ , ರವಿಕುಮಾರ್,ಸತೀಶ್ ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ