ಹುಳಿಯಾರು ಹೋಬಳಿ ಬರಕನಹಾಲ್ ನ ಶ್ರೀಕರಿಯಮ್ಮದೇವಿಯ ನೂತನ ದೇವಾಲಯ ಪ್ರವೇಶ ಹಾಗೂ ಕಳಸ ಪ್ರತಿಷ್ಠಾಪನೆ ಶುಕ್ರವಾರ ವಿವಿಧ ದೇವರುಗಳ ಸಮ್ಮುಖದಲ್ಲಿ ಶ್ರದ್ದಾಭಕ್ತಿಯಿಂದ ನಡೆಯಿತು.
ಹುಳಿಯಾರು ಹೋಬಳಿ ಬರಕನಹಾಲ್ ನ ಶ್ರೀಕರಿಯಮ್ಮದೇವಿಯ ನೂತನ ದೇವಾಲಯ ಪ್ರವೇಶ ಹಾಗೂ ಕಳಸ ಪ್ರತಿಷ್ಠಾಪನೆ ಅಂಗವಾಗಿ ಪೂರ್ಣಕುಂಭಗಳ ಮೆರವಣಿಗೆ ನಡೆಸಲಾಯಿತು. |
ಹುಳಿಯಾರು ಹೋಬಳಿ ಬರಕನಹಾಲ್ ನ ಶ್ರೀಕರಿಯಮ್ಮದೇವಿಯ ನೂತನ ದೇವಾಲಯ ಪ್ರವೇಶ ಹಾಗೂ ಕಳಸ ಪ್ರತಿಷ್ಠಾಪನೆ ಅಂಗವಾಗಿ ೧೦೧ ಪೂರ್ಣಕುಂಭ ಕಳಸಗಳನ್ನು ಪ್ರತಿಷ್ಠಾಪಿಸಿರುವುದು. |
ದೇವಾಲಯ ಪ್ರಾರಂಭೋತ್ಸವದ ಅಂಗವಾಗಿ ಗುರುವಾರ ಸಂಜೆ ಆಲಯ ಪ್ರವೇಶ, ಪುಣ್ಯಾಹ, ನಾಂದಿ,ಅಂಕುರಾರೋಹಣ, ನವಗ್ರಹ,ಅಷ್ಠ ದಿಕ್ಪಾಲಕ,ಸಪ್ತ ಸಭಾ ದೇವತಾ ಕಳಸ ಸ್ಥಾಪನೆ, ಪೂರ್ವಕ ಹೋಮ ನಡೆಸಲಾಯಿತು. ಸಂಜೆ ಶಿಡ್ಲಕಟ್ಟೆ ಕರಿಯಮ್ಮದೇವಿ,ಕಾರೇಹಳ್ಳಿ ರಂಗನಾಥಸ್ವಾಮಿ,ಸಂಗೇನಹಳ್ಳಿ ಆಂಜನೇಯಸ್ವಾಮಿ,ಹಂದನಕೆರೆ ಗುರುಗಿರಿ ಸಿದ್ದೇಶ್ವರಸ್ವಾಮಿ,ದೊಡ್ಡಬ್ಯಾಲದಕೆರೆ ಆಂಜನೇಯಸ್ವಾಮಿ, ಹಟ್ಟಿಲಕ್ಕಮ್ಮದೇವಿ, ಆಗ್ರಹಾರ ಭೈರೇಶ್ವರಸ್ವಾಮಿ,ದೊಡ್ಡನಹಟ್ಟಿ ದೊಡ್ಡಮ್ಮದೇವಿ,ಬಾಲದೇವರಹಟ್ಟಿ ಮಾಳಮ್ಮ, ಬರಕನಹಾಲ್ ತಾಂಡ್ಯದ ಸೇವಾಲಾಲ್ , ಮರಿಯಮ್ಮದೇವಿ, ಭೈರಾಪುರಹಟ್ಟಿ ದೊಡ್ಡಮ್ಮದೇವಿ ದೇವರುಗಳ ಆಗಮನದೊಂದಿಗೆ ಕೂಡುಭೇಟಿ ನಡೆಸಲಾಯಿತು.
ಶುಕ್ರವಾರ ಮುಂಜಾನೆಯಿಂದ ಪೂಜಾಕೈಂಕರ್ಯಗಳು ಪ್ರಾರಂಭಗೊಂಡು ಶಿಖರದ ಕಳಸ ಸ್ಥಾಪನೆ ,ಅಭಿಷೇಕ,ಅರ್ಚನೆ,ಸಹಸ್ರನಾಮ, ಪೂರ್ಣಾಹುತಿ ಹಾಗೂ ಮಹಾಮಂಗಳಾರತಿ ನಡೆದ ನಂತರ ಆಗಮಿಸಿದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಅರಸೀಕೆರೆ ಯಳನಡು ಮಹಾಸಂಸ್ಥಾನದ ಜ್ಞಾನಪ್ರಭು ಸಿದ್ಧರಾಮದೇಶಿಕೇಂದ್ರ ಮಹಾಸ್ವಾಮಿ, ಗೋಡೆಕೆರೆ ಮಠದ ಸ್ಥಿರ ಪಟ್ಟಾಧ್ಯಕ್ಷರಾದ ಸಿದ್ದರಾಮದೇಶಿಕೇಂದ್ರ ಮಹಾಸ್ವಾಮಿ, ಚರ ಪಟ್ಟಾಧ್ಯಕ್ಷರಾದ ಮೃತ್ಯುಂಜಯದೇಶಿಕೇಂದ್ರ ಮಹಾಸ್ವಾಮೀಜಿ ಹಾಗೂ ಮಾಜಿಶಾಸಕ ಮಾಧುಸ್ವಾಮಿ ಸೇರಿದಂತೆ ಇತರ ಜನಪ್ರತಿನಿಧಿಗಳು , ಸುತ್ತಮುತ್ತಲ ಹಳ್ಳಿಯ ಅಪಾರ ಸಂಖ್ಯೆಯ ಭಕ್ತಾಧಿಗಳು ಆಗಮಿಸಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ