ಹುಳಿಯಾರು ಹೋಬಳಿ ಕುರಿಹಟ್ಟಿಯಲ್ಲಿ (ತಾ.೧೮) ಶನಿವಾರ ಬೆಳಿಗ್ಗೆ ಕೆಂಕೆರೆ ಕಾಳಮ್ಮನ ನಡೆಮುಡಿ ಹಾಗೂ ಕಳಸ ಮಹೋತ್ಸವ ದಮ್ಮಡಿಹಟ್ಟಿ ಈರಬೊಮ್ಮಕ್ಕದೇವಿ, ಹುಳಿಯಾರು ದುರ್ಗಮ್ಮ, ಗೌಡಗೆರೆ ದುರ್ಗಮ್ಮ ದೇವರುಗಳೊಂದಿಗೆ ಜರುಗಲಿದೆ.
ಗ್ರಾಮದ ಸಮೀಪದ ಬಾವಿಯೊಂದರ ಬಳಿ ಗಂಗಾಸ್ನಾನ,ಕಳಸ ಸ್ಥಾಪನೆ ನಡೆದು ನಂತರ ನಡೆಮುಡಿ ಕಳಸ ಪ್ರಾರಂಭವಾಗಿ ಶ್ರೀಆಂಜನೇಯಸ್ವಾಮಿ ದೇವಾಲಯಕ್ಕೆ ಆಗಮಿಸಿ ಪೂಜೆಸಲ್ಲಿಸಿ ಕಳಸಗಳ ವಿಸರ್ಜನೆ ನಡೆಯಲಿದೆ. ಕುರಿಹಟ್ಟಿ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಯ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಸಮಿತಿಯವರು ಕೋರಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ