ಹುಣ್ಣಿಮೆ ಅಂಗವಾಗಿ ಇಂದು ಅನೇಕ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ನಡೆಯಿತು. ಹುಳಿಯಾರಿನ ಬನಶಂಕರಿ ದೇವಾಲಯದಲ್ಲಿ, ಶನೇಶ್ವರ ದೇವಾಲಯದಲ್ಲಿ,ಕೆಂಕೆರೆ ಪುರದಮಠದ ಶ್ರೀಚನ್ನಬಸವೇಶ್ವರಸ್ವಾಮಿ ದೇವಾಲಯದಲ್ಲಿ ಹಾಗೂ ಬೋರನಕಣಿವೆಯ ಸೇವಾಚೇತನದ ಶ್ರೀಶಿರಡಿ ಸಾಯಿಬಾಬಾ ಮಂದಿರದಲ್ಲಿ ಶನಿವಾರ ಪೌರ್ಣಮಿ ಪೂಜೆ ಸೇರಿದಂತೆ ಸತ್ಯನಾರಾಯಣ ಪೂಜೆ ನಡೆಯಿತು.
ಸಾಯಿಬಾಬಾ ಮಂದಿರದಲ್ಲಿ ಅರ್ಚಕ ನಂಜುಂಡರಾವ್ ಹಾಗೂ ರವಿಕುಮಾರ್ ಅವರ ಪೌರೋಹಿತ್ಯದಲ್ಲಿ ಅಪಾರ ಭಕ್ತಾಧಿಗಳ ಸಮ್ಮುಖದಲ್ಲಿ ಅಭಿಷೇಕ,,ಅರ್ಚನೆ, ಸತ್ಯನಾರಾಯಣ ಪೂಜೆ ನೆಡೆಯಿತು. ಸಾಯಿಬಾಬಾಗೆ ಕಾಕಡಾರತಿ ಮತ್ತು ಭಜನೆ ನಡೆದು ಭಕ್ತಾಧಿಗಳಿಗೆ ಪ್ರಸಾದ ಹಾಗೂ ಉಪಹಾರ ವಿತರಿಸಲಾಯಿತು. ಬನಶಂಕರಿ ದೇವಾಲಯದಲ್ಲಿ ಅರ್ಚಕ ಶ್ರೀಧರ್ ಸತ್ಯನಾರಾಯಣ ಪೂಜೆ ನೆರವೇರಿಸಿದರೆ , ಪುರದಮಠದ ಚನ್ನಬಸವೇಶ್ವರಸ್ವಾಮಿ ದೇವಾಲಯದಲ್ಲಿ ಭಕ್ತಾಧಿಗಳಿಗೆ ದಾಸೋಹದ ವ್ಯವಸ್ಥೆ ಮಾಡಲಾಗಿತ್ತು.
ಹುಳಿಯಾರು ಸಮೀಪದ ಬೋರನಕಣಿವೆಯ ಸೇವಾಚೇತನದ ಶ್ರೀಶಿರಡಿ ಸಾಯಿಬಾಬಾ ಮಂದಿರದಲ್ಲಿ ಹುಣ್ಣಿಮೆ ಅಂಗವಾಗಿ ಸತ್ಯನಾರಾಯಣ ಪೂಜೆ ನಡೆಯಿತು. |
ಗ್ರಹಣ: ಶನಿವಾರದಂದು ಚಂದ್ರಗ್ರಹಣ ಹಿನ್ನಲೆಯಲ್ಲಿ ಎಲ್ಲಾ ದೇವಾಲಯಗಳಲ್ಲೂ ಭಕ್ತಾಧಿಗಳ ಸಂಖ್ಯೆ ಹೆಚ್ಚಿದ್ದು, ದೋಷ ಪರಿಹಾರಾರ್ಥವಾಗಿ ವಿಶೇಷ ಹೋಮ ಹಾಗೂ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳು ನಡೆಯುತ್ತಿದ್ದು ಕಂಡುಬಂತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ