ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮದಲ್ಲಿ ಬಸವಜಯಂತಿ ಅಂಗವಾಗಿ ಶ್ರೀಚನ್ನಬವೇಶ್ವರಸ್ವಾಮಿ ರಥೋತ್ಸವ ಮಂಗಳವಾರ ಮಧ್ಯಾಹ್ನ ಅಪಾರ ಸಂಖ್ಯೆಯ ಭಕ್ತಾಧಿಗಳ ಹರ್ಷೋದ್ಗಾರದಲ್ಲಿ ವೈಭವಯುತವಾಗಿ ಜರುಗಿತು.
ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮದಲ್ಲಿ ಬಸವಜಯಂತಿ ಅಂಗವಾಗಿ ಶ್ರೀಚನ್ನಬವೇಶ್ವರಸ್ವಾಮಿ ರಥೋತ್ಸವ ಮಂಗಳವಾರ ಮಧ್ಯಾಹ್ನ ಅಪಾರ ಸಂಖ್ಯೆಯ ಭಕ್ತಾಧಿಗಳ ಹರ್ಷೋದ್ಗಾರದಲ್ಲಿ ವೈಭವಯುತವಾಗಿ ಜರುಗಿತು. |
ಹುಳಿಯಾರು ಹೋಬಳಿ ಕೆಂಕೆರೆಯ ಶ್ರೀಬಸವಕೇಂದ್ರದವರು ಮಂಗಳವಾರ ಬಸವಜಯಂತಿ ಅಂಗವಾಗಿ ಗ್ರಾಮದ ಬೀದಿಗಳಲ್ಲಿ ಬಸವ ಭಜನೆ ಮಾಡುವ ಮೂಲಕ ಮೆರವಣಿಗೆ ನಡೆಸಿದರು. |
ರಥೋತ್ಸವದ ಅಂಗವಾಗಿ ಮುಂಜಾನೆ ಮಹದೇವಜ್ಜನ ಮನೆಯವರಿಂದ ಕಾಳಮ್ಮದೇವಿ ಸಮ್ಮುಖದಲ್ಲಿ ರಥದ ಪುಣ್ಯಾಹ ಕಾರ್ಯ,ಅನ್ನಬಲಿ, ಕಳಸ ಸ್ಥಾಪನೆ ನಡೆಯಿತು. ನಂತರ ಗ್ರಾಮಸ್ಥರೆಲ್ಲಾ ಸೇರಿ ರಥಕ್ಕೆ ಬಗೆಬಗೆಯ ಹೂ,ಹಾರ, ಕೊಬ್ಬರಿ ಹಾರ, ಹತ್ತಿ ಹಾರ,ಬಾಳೆಗೊನೆ,ಎಳನೀರು ಗೊನೆ, ಬಾವುಟಗಳನ್ನು ಕಟ್ಟಿ ಅಲಂಕರಿಸಿದರು. ನಂತರ ದೇವಸ್ಥಾನದಿಂದ ಅಲಂಕೃತ ಚನ್ನಬಸವೇಶ್ವರಸ್ವಾಮಿಯನ್ನು ಕಾಳಮ್ಮದೇವಿ, ದಮ್ಮಡಿಹಟ್ಟಿ ಈರಬೊಮ್ಮಕ್ಕದೇವಿ, ಗೌಡಗೆರೆ ದುರ್ಗಮ್ಮದೇವಿ, ಬರದಲೇಪಾಳ್ಯದ ಅಂಬಿಕದೇವಿಯೊಂದಿಗೆ ಹೊರಡಿಸಿದರು. ಧ್ವಜಕುಣಿತ ಹಾಗೂ ಬಸವನ ಮೆರವಣಿಗೆಯೊಂದಿಗೆ ಸ್ವಾಮಿಯನ್ನು ರಥದಲ್ಲಿಗೆ ಕರೆತಂದು ರಥ ಪ್ರದಕ್ಷಿಣೆ ನಂತರ ಸ್ವಾಮಿ ಹಾಗೂ ಕಾಳಮ್ಮ ದೇವಿಯನ್ನು ರಥಕ್ಕೇರಿಸಿದರು. ಭಕ್ತರ ಜೈಕಾರದೊಂದಿಗೆ ಈಡುಗಾಯಿ ಹೊಡೆಯುವ ಮೂಲಕ ರಥವನ್ನೆಳೆಯಲಾಯಿತು.
ರಥೋತ್ಸವದ ನಂತರ ಮಹಿಳೆಯರು ರಥದ ಮೇಲಿದ್ದ ಸ್ವಾಮಿಗೆ ಹಣ್ಣುಕಾಯಿ ಮಾಡಿಸಲು ಮುಗಿಬಿದ್ದರು. ಭಕ್ತಾಧಿಗಳಿಗಾಗಿ ಪನಿವಾರ,ಪಾನಕ, ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಬಿಸಿಲನ್ನು ಲೆಕ್ಕಿಸದೆ ಕೆಂಕೆರೆ ಸೇರಿದಂತೆ ಬರದಲೇಪಾಳ್ಯ,ಹೊನ್ನಯ್ಯನಪಾಳ್ಯ,ಬಸವನಗುಡಿ,ಗೊಲ್ಲರಹಟ್ಟಿ,ಪುರದಮಠ,ಕಂಪನಹಳ್ಳಿಯ ಸುತ್ತಮುತ್ತಲ ಜನ ಆಗಮಿಸಿದ್ದು ಸ್ವಾಮಿಯ ದರ್ಶನ ಪಡೆದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ