ಹುಳಿಯಾರು ಹೋಬಳಿ ಸೀಗೆಬಾಗಿಯ ಪುರಾಣಪ್ರಸಿದ್ದ ಶ್ರೀ ತಿಪ್ಪೇರುದ್ರಸ್ವಾಮಿಯ ೧೪ ನೇ ವರ್ಷದ ಜಾತ್ರಾಮಹೋತ್ಸವದ ಅಂಗವಾಗಿ ಪಟ್ಟದ ಕಳಸ ಮಹೋತ್ಸವ ಶ್ರದ್ದಾಭಕ್ತಿಯಿಂದ ನಡೆಯಿತು.
ಹುಳಿಯಾರು ಹೋಬಳಿ ಸೀಗೆಬಾಗಿಯ ಶ್ರೀ ತಿಪ್ಪೇರುದ್ರಸ್ವಾಮಿಯ ಜಾತ್ರಾಮಹೋತ್ಸವದ ಅಂಗವಾಗಿ ಪಟ್ಟದ ಕಳಸ ಮಹೋತ್ಸವ ನಡೆಯಿತು. |
ಜಾತ್ರಮಹೋತ್ಸವದ ಅಂಗವಾಗಿ ವರದರಾಜಸ್ವಾಮಿ, ದುರ್ಗಮ್ಮ,ಚೌಲಿಹಳ್ಳಿ ಹರಳಪ್ಪಸ್ವಾಮಿ, ತೊರೆಮನೆ ಮಹಾಲಿಂಗಸ್ವಾಮಿಗಳ ಅಶೀರ್ವಾದದೊಂದಿಗೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ನಡೆದವು. ಸ್ವಾಮಿಯ ಗಂಗಾಸ್ನಾನ,ನಡೆಮುಡಿ ಉತ್ಸವ,ಮಹಾಮಂಗಳಾರತಿ ಹಾಗೂ ಪ್ರಸಾದ ವಿತರಣೆ ನಡೆಯಿತು. ಸೀಗೆಬಾಗಿ ಸೇರಿದಂತೆ ಸುತ್ತಮುತ್ತಲ ಹಳ್ಳಿಗಳ ಭಕ್ತಾಧಿಗಳು ಆಗಮಿಸಿದ್ದು ಅಲಂಕೃತಸ್ವಾಮಿಯ ದರ್ಶನ ಪಡೆದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ