ಕಂಪ್ಯೂಟರ್ ಗೆ ಯಾವರೀತಿ ತಂತ್ರಾಂಶಗಳನ್ನು ಹಾಕಿದಾಗ ಅದು ಕಾರ್ಯ ಮಾಡುತ್ತದೋ ಅದರಂತೆ ಮಾನವನ ಶರೀರವೂ ಸಹ ವಿವಿಧ ವಿಷಯಗಳನ್ನು ಗ್ರಹಿಸುವ ಮೂಲಕ ತನ್ನ ಕಾರ್ಯ ಮಾಡುತ್ತದೆ. ಅ ನಿಟ್ಟಿನಲ್ಲಿ ಉತ್ತಮ ವಿಚಾರಗಳ ಗ್ರಹಿಕೆಯತ್ತ ದೃಢ ಸಂಕಲ್ಪವಿರಬೇಕು ಎಂದು ರಾಜ್ಯ ಸಾಮಾಜಿಕ ಅಭಿವೃದ್ದಿ ಸಲಹೆಗಾರ ತುಮಕೂರಿನ ಸಿ.ಸಿ.ಪಾವಟೆ ತಿಳಿಸಿದರು.
ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಶಾಸಕ ಸಿ.ಬಿ.ಸುರೇಶ್ ಬಾಬು ಕ್ರೀಡೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು. |
ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ನಡೆದ ೨೦೧೪-೧೫ನೇ ಸಾಲೀನ ಸಾಂಸ್ಕೃತಿಕ,ಕ್ರೀಡಾ,ಎನ್,ಎಸ್,ಎಸ್ ಹಾಗೂ ಯುವ ರೆಡ್ ಕ್ರಾಸ್ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ನಮ್ಮ ಸೃಷ್ಠಿಯಲ್ಲಿ ಸಕಲ ಜೀವರಾಶಿಗಳಿದ್ದರೂ ಸಹ ಮಾನವ ಮಾತ್ರ ಅವುಗಳಿಗಿಂತ ಭಿನ್ನವಾಗಿದ್ದು ತನಗೆ ಬೇಕಾದಾಗೆ ಬದುಕುವ,ಆಲೋಚಿಸುವ ವಿಶಿಷ್ಟತೆಯನ್ನು ಹೊಂದಿದ್ದಾನೆ. ಸೂರ್ಯ, ಚಂದ್ರ, ವಾಯು ಸೇರಿದಂತೆ ಪ್ರಕೃತಿಯಲ್ಲಿನ ಕೆಲ ಪ್ರಾಣಿಗಳು ಶತಶತಮಾನಗಳಿಂದಲೂ ಅಂದು ಯಾವರೀತಿ ಇದ್ದವೂ ಇಂದೂ ಸಹ ಅದೇ ರೀತಿ ಜೀವಿಸುತ್ತಿವೆ. ಆದರೆ ಮಾನವ ಮಾತ್ರ ತನ್ನಲ್ಲಿ ಬದಲಾವಣೆ ತಂದುಕೊಂಡು ತನ್ನದೇ ಆದ ರೀತಿಯಲ್ಲಿ ಬದುಕನ್ನು ಸಾಗಿಸುತ್ತಿದ್ದಾನೆ ಎಂದರು. ಪ್ರಪಂಚದಲ್ಲಿ ಹೆಚ್ಚು ಯುವಪೀಳಿಗೆಯನ್ನು ಹೊಂದಿರುವ ರಾಷ್ಟ್ರ ಭಾರತವಾಗಿದ್ದು ೨೦೨೦ರ ವೇಳೆಗೆ ಹೆಚ್ಚಿನ ಆವಿಷ್ಕಾರಗಳಿಂದ ಪ್ರಪಂಚದಲ್ಲೇ ಉನ್ನತ ಸ್ಥಾನಕ್ಕೇರಲಿದೆ. ಇದನ್ನು ಅರಿತ ಕೆಲ ನೆರೆಹೊರೆ ರಾಷ್ಟ್ರಗಳು ಭಾರತದ ಯುವಪೀಳಿಗೆಯ ದಿಕ್ಕುತಪ್ಪಿಸುವ ಹುನ್ನಾರ ಮಾಡುತ್ತಿವೆ. ಈ ಬಗ್ಗೆ ನಮ್ಮ ಯುವಪೀಳಿಗೆ ಎಚ್ಚರದಿಂದಿರಬೇಕು ಎಂದರು.
ವಿದ್ಯಾರ್ಥಿ ದೆಸೆಯಲ್ಲಿ ಕಾಲೇಜು ಜೀವನ ಮಹತ್ವದಾಗಿದ್ದು ಇಲ್ಲಿ ಪ್ರೀತಿ,ಪ್ರೇಮ, ವಿದ್ಯೆ ಎಲ್ಲವೂ ಇದ್ದು ಈ ಸಮಯದಲ್ಲಿ ವಿದ್ಯಾರ್ಥಿಗಳು ಸ್ವಲ್ಪ ಎಚ್ಚರ ತಪ್ಪಿದರೆ ಜೀವನದ ದಿಕ್ಕೆ ಬದಲಾಗುತ್ತದೆ. ಇಂತಹ ಸನ್ನಿವೇಶದಲ್ಲಿ ವಿದ್ಯಾರ್ಥಿಗಳು ಉತ್ತಮ ವಿಚಾರಗಳತ್ತ ಗಮನಕೊಡುವ ಮೂಲಕ ತಮ್ಮ ಜೀವನದಲ್ಲಿ ಯಶಸ್ಸುಗಳಿಸಿ ಎಂದು ಹಾರೈಸಿದರು.
ಕ್ರೀಡೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದ ಶಾಸಸ ಸಿ.ಬಿ.ಸುರೇಶ್ ಬಾಬು ಮಾತನಾಡಿ, ವಿದ್ಯಾರ್ಥಿಗಳು ಕಾಲೇಜು ಮಟ್ಟದ ಕ್ರೀಡಾಕೋಟದ ಜೊತೆಗೆ ರಾಷ್ಟ್ರೀಯಮಟ್ಟದ ಕ್ರೀಡಾಕೂಟಗಳಲ್ಲಿ ಸ್ಪರ್ಧಿಸಿ ಜಯಗಳಿಸಿ ಕಾಲೇಜಿಗೆ ಕೀರ್ತಿ ತನ್ನಿ ಎಂದರು. ಕಾಲೇಜು ಅಭಿವೃದ್ದಿ ಹಾಗೂ ಕ್ರೀಡೆಗೆ ಪೂರಕವಾದ ಸೌಲಭ್ಯಗಳನ್ನು ಕಲ್ಪಿಸಿಕೊಡುವುದಾಗಿ ತಿಳಿಸಿದರು.
ಈ ವೇಳೆ ಪ್ರಾಂಶುಪಾಲ ಬಿ.ಆರ್.ಕೃಷ್ಣಮೂರ್ತಿ ಬಿಳಿಗೆರೆ , ಕಾಲೇಜು ಅಭಿವೃದ್ದಿ ಸಮಿತಿಯ ನಂದಿಹಳ್ಳಿ ಶಿವಣ್ಣ,ಜಲಾಲ್ ಸಾಬ್,ಪರ್ವಿನ್, ಉಪನ್ಯಾಸಕರಾದ ಶಂಕರಲಿಂಗಯ್ಯ ,ಅಶೋಕ್, ಇಬ್ರಾಹಿಂ, ಶ್ರೀನಿವಾಸಪ್ಪ, ಹನುಮಂತಪ್ಪ, ದೈಹಿಕ ಶಿಕ್ಷಣ ನಿರ್ದೇಶಕ ಶಿವಯ್ಯ,ಲೋಕೇಶ್,ಉಮೇಶ್ ಸೇರಿದಂತೆ ಸಿಬ್ಬಂದಿಯವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಿವಿಧ ಆಟೋಟದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ