ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವಾದ ಎಸ್ಸೆಸ್ಸೆಲ್ಸಿ ಪರೀಕ್ಷೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಸೋಮವಾರದಂದು ಮುಕ್ತಾಯವಾಗಿದ್ದು ಪರೀಕ್ಷ ಕೇಂದ್ರದಿಂದ ಹೊರ ಬಂದ ವಿದ್ಯಾರ್ಥಿಗಳಲ್ಲಿ ಅಬ್ಬಾ ಪರೀಕ್ಷೆ ಮುಗಿಯಿತಲ್ಲಾ ಎಂಬ ನಿಟ್ಟುಸಿರು ಜೊತೆಗೆ ಸಂತಸ ಮನೆ ಮಾಡಿತ್ತು.
ಹುಳಿಯಾರಿನ ಟಿ.ಆರ್.ಎಸ್.ಆರ್ ಶಾಲೆಯ ಪರೀಕ್ಷಾ ಕೇಂದ್ರದಿಂದ ಕೊನೆಯ ದಿನದ ಪರೀಕ್ಷೆ ಬರೆದು ಸಂತಸದಿಂದ ಹೊರಬರುತ್ತಿರುವ ಪರೀಕ್ಷಾರ್ಥಿಗಳು. |
ರಾಜ್ಯಾದ್ಯಂತ ನಡೆಯುತ್ತಿದ್ದ ಪರೀಕ್ಷೆಯಲ್ಲಿ ಇಂದು ಕಡೆ ವಿಷಯವಾಗಿ ಸಮಾಜ ವಿಜ್ಞಾನವನ್ನು ಬರೆದ ಪರೀಕ್ಷಾರ್ಥಿಗಳು ಉತ್ಸಾಹದಿಂದಲೇ ಪರೀಕ್ಷೆ ಎದುರಿಸಿದ್ದು ಉತ್ತಮ ಅಂಕ ಬರುತ್ತವೆ ಎಂಬ ನೀರೀಕ್ಷೆ ವ್ಯಕ್ತಪಡಿಸಿದ್ದಾರೆ.
ಹೋಬಳಿಯ ಹುಳಿಯಾರು-ಕೆಂಕೆರೆ ಸರ್ಕಾರಿ ಪ್ರೌಢಶಾಲೆ, ಟಿ.ಆರ್.ಎಸ್.ಆರ್ ಶಾಲೆ, ಕನಕದಾಸ ಶಾಲೆ, ಬೋರನಕಣಿವೆಯ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ನಡೆದಿತು. ಹೋಬಳಿಯ ಪ್ರೌಢಶಾಲೆಗಳ ಹತ್ತನೇ ತರಗತಿ ವಿದ್ಯಾರ್ಥಿಗಳನ್ನು ಒಂದುಗೂಡಿಸಿ ನಾಲ್ಕು ಪರೀಕ್ಷಾ ಕೇಂದ್ರಗಳಿಗೆ ಹಾಕಲಾಗಿದ್ದು, ಯಾವುದೇ ಡಿಬಾರ್ ಪ್ರಕರಣ ವರದಿಯಾಗಲಿಲ್ಲ.
ವಿದ್ಯಾರ್ಥಿಗಳು ಈ ಬಾರಿ ಉತ್ಸಾಹದಿಂದ ಪರೀಕ್ಷೆ ಬರೆದಿದ್ದು, ಅವರ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ ಹಾಗೂ ಪರೀಕ್ಷೆ ವೇಳೆ ಯಾವುದೇ ತೊಂದರೆಯಾಗದಂತೆ ವ್ಯವಸ್ಥೆ ಮಾಡಲಾಗಿತ್ತು. ಇದುವರೆಗೆ ನಡೆದ ಪರೀಕ್ಷೆಯಲ್ಲಿ ಯಾವೊಬ್ಬ ವಿದ್ಯಾರ್ಥಿಯೂ ಅನುಚಿತವಾಗಿ ವರ್ತಿಸದೆ ಉತ್ತಮ ರೀತಿಯಲ್ಲಿ ನಡೆದುಕೊಂಡಿದ್ದಾರೆ ಎಂದು ಟಿ.ಆರ್.ಎಸ್.ಆರ್ ಶಾಲೆಯ ಪರೀಕ್ಷಾ ಕೇಂದ್ರದ ಮೇಲ್ವಿಚಾರಕ ಹೆಚ್.ವಿ.ರಮೇಶ್ ತಿಳಿಸಿದರು.
ಪರೀಕ್ಷೆ ತೀರಾ ಸುಲಭವೂ ಅಲ್ಲ, ತೀರಾ ಕಷ್ಟವೂ ಅನಿಸಲಿಲ್ಲ ಎಂಬ ಮಿಶ್ರಪ್ರತಿಕ್ರಿಯೆ ವ್ಯಕ್ತವಾಯಿತು. ಚೆನ್ನಾಗಿ ಪರೀಕ್ಷೆ ಮಾಡಿದ್ದೇವೆ ಫಸ್ಟ್ ಕ್ಲಾಸ್ ಖಂದಿತ ಎಂಬ ಆತ್ಮವಿಶ್ವಾಸದ ಮಾತು ಎಲ್ಲರಲ್ಲೂ ಕೇಳಿಬಂತು. ಸದ್ಯ ಪರೀಕ್ಷೆ ಮುಗಿದ ಸಂಭ್ರಮದಲ್ಲಿ ಸಹಪಾಠಿಗಳೊಡನೆ ಬೇಕರಿ , ಸಿನಿಮಾಗಳಿಗೆ ಲಗ್ಗೆಯಿಟ್ಟ ಹುಡುಗರಲ್ಲಿ ಖುಷಿ ಕಂಡುಬಂತು.
---------
ಎಲ್ಲಾ ಆರು ಪ್ರಶ್ನೆಪತ್ರಿಕೆಗಳ ಪೈಕಿ ಇಂಗ್ಲಿಷ್ ಹಾಗೂ ಗಣಿತ ಸ್ವಲ್ಪ ಕಷ್ಟವಾಗಿತ್ತು ಬಿಟ್ಟರೆ ಉಳಿದ ಪ್ರಶ್ನೆಪತ್ರಿಕೆಗಳು ಸುಲಭವಾಗಿದ್ದವು. ಎಲ್ಲಾ ಪ್ರಶ್ನೆಗಳಿಗೆ ಉತ್ತರ ಬರೆದಿದ್ದು ಶೇ.೭೦ ರಷ್ಟು ಅಂಕ ಬರುತ್ತವೆ : ಕೆಂಕೆರೆ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಕಂಠೇಶ್ .
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ