ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮದ ಶ್ರೀಕಾಳಿಕಾಂಬ ದೇವಿ ಹಾಗೂ ಚನ್ನಬಸವೇಶ್ವರಸ್ವಾಮಿಯ ಜಾತ್ರಾಮಹೋತ್ಸವ ಹಾಗೂ ಅಂಬೇಡ್ಕರ್ ಜಯಂತಿ ಅಂಗವಾಗಿ ಅಂಬೇಡ್ಕರ್ ಕ್ರಿಕೆಟ್ ಕ್ಲಬ್ ವತಿಯಿಂದ ತಾ.೧೪ರ ಮಂಗಳವಾರ ಮತ್ತು ತಾ.೧೫ರ ಬುಧವಾರ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಯನ್ನು ಅಯೋಜಿಸಲಾಗಿದೆ..
ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಟೂರ್ನಿ ಉದ್ಘಾಟಿಸಲಿದ್ದು, ಮಾಜಿಶಾಸಕ ಜೆ.ಸಿ.ಮಾಧುಸ್ವಾಮಿ ಅಧ್ಯಕ್ಷತೆವಹಿಸುವರು. ತಾ.ಪಂ ಸದಸ್ಯ ನವೀನ್,ಗ್ರಾ.ಪಂ.ಸದಸ್ಯರಾದ ಯು.ಸಿ.ಗೌಡ, ಬಸವರಾಜು(ಬೆಂಕಿ),ಕುಮಾರಯ್ಯ,ವಿಶ್ವಭಾರತಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಅನಂತರಾಮಯ್ಯ,ಸೊಸೈಟಿ ಅಧ್ಯಕ್ಷ ಪಂಚಾಕ್ಷರಯ್ಯ,ಸೋರಲಮಾವು ಶ್ರೀಹರ್ಷ ಸೇರಿದಂತೆ ಇತರರು ಆಗಮಿಸಲಿದ್ದಾರೆ. ಟೂರ್ನಿಯಲ್ಲಿ ಪ್ರಥಮ ಬಹುಮಾನ ರೂ.೫೦೦೧ ,ದ್ವಿತೀಯ ಬಹುಮಾನ ರೂ.೩೦೦೧ ಹಾಗೂ ಪಾರಿತೋಷಕ. ಪ್ರವೇಶ ಶುಲ್ಕ ೨೫೦ರೂ. ತಂಡದ ಆಟಗಾರರಿಗೆ ಉಪಹಾರ ವ್ಯವಸ್ಥೆಯಿದ್ದು ಹೆಚ್ಚಿನ ಮಾಹಿತಿಗಾಗಿ ೮೯೭೦೯೬೮೪೮೦, ೯೬೮೬೬೪೫೬೧೧,೮೧೯೭೬೮೯೨೭೧,೭೪೦೬೩೧೧೫೪೨ ಸಂಪರ್ಕಿಸಬಹುದಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ