ಹುಳಿಯಾರು ಹೋಬಳಿ ಸೀಗೆಬಾಗಿಯ ಪುರಾಣ ಪ್ರಸಿದ್ದ ಶ್ರೀವರದರಾಜಸ್ವಾಮಿಯ ವೈಭವಯುತ ಬ್ರಹ್ಮರಥೋತ್ಸವ ಗುರುವಾರ ಮಧ್ಯಾಹ್ನ ಅಪಾರ ಸಂಖ್ಯೆಯ ಭಕ್ತಾಧಿಗಳ ಹರ್ಷೋದ್ಘಾರದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿತು.
ಹುಳಿಯಾರು ಹೋಬಳಿ ಸೀಗೆಬಾಗಿಯ ಪುರಾಣ ಪ್ರಸಿದ್ದ ಶ್ರೀವರದರಾಜಸ್ವಾಮಿಯ ಬ್ರಹ್ಮರಥೋತ್ಸವ ಗುರುವಾರ ಮಧ್ಯಾಹ್ನ ಅಪಾರ ಸಂಖ್ಯೆಯ ಹರ್ಷೋದ್ಘಾರದಲ್ಲಿ ವೈಭವಯುತವಾಗಿ ಜರುಗಿತು. |
ರಥೋತ್ಸವದ ಅಂಗವಾಗಿ ಮುಂಜಾನೆಯಿಂದ ವಿವಿಧ ಧಾರ್ಮಿಕ ಕೈಂಕರ್ಯಗಳು ಪ್ರಾರಂಭಗೊಂಡು ರಥಕ್ಕೆ ಪುಣ್ಯಾಹ,ಸಹಸ್ರನಾಮಾರ್ಚನೆ,ಅಷ್ಟಾವಧಾನ,ಕಳಸಸ್ಥಾಪನೆ ಸೇರಿದಂತೆ ವಿವಿಧ ಪೂಜೆಗಳನ್ನು ನಡೆಸಿದರು. ನಂತರ ಗ್ರಾಮಸ್ಥರೆಲ್ಲಾ ಸೇರಿ ಬಗೆಬಗೆ ಹೂಹಾರ,ಬಾವುಟಗಳಿಂದ ರಥದವನ್ನು ಅಲಂಕರಿಸಿ ಸಿದ್ದಗೊಳಿಸಿದರು. ದೇವಾಲಯದಿಂದ ಅಲಂಕೃತ ಸ್ವಾಮಿಯನ್ನು ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ವಿವಿಧ ದೇವರುಗಳೊಂದಿಗೆ ವಾದ್ಯ ಮೇಳದೊಂದಿಗೆ ರಥದ ಬಳಿ ಕರೆತರಲಾಯಿತು. ರಥಕ್ಕೆ ಪ್ರದಕ್ಷಿಣೆ ಹಾಕಿದ ನಂತರ ವರದರಾಜಸ್ವಾಮಿ ಗೋವಿಂದ ಎಂದು ಜೈಕಾರ ಹಾಕುತ್ತಾ ಸ್ವಾಮಿಯನ್ನು ರಥಕ್ಕೇರಿಸಿ, ಈಡುಗಾಯಿ ಹೊಡೆದು ಮಹಾಮಂಗಳಾರತಿ ನಡೆಸಿ ರಥವನ್ನೆಳೆಯಲಾಯಿತು. ಆಗಮಿಸಿದ್ದ ಭಕ್ತರು ರಥವನ್ನೆಳೆಯುವ ಮೂಲಕ ತಮ್ಮ ಭಕ್ತಿಭಾವ ವ್ಯಕ್ತಪಡಿಸಿದರು. ರಥೋತ್ಸವದ ನಂತರ ಬ್ರಾಹ್ಮಣ ಸುಹಾಸಿನಿಯರಿಂದ ಹಾಗೂ ವೈಷ್ಣವ ಸಮಾಜದವರಿಂದ ವಸಂತಪೂಜೆ ನಡೆಯಿತು. ನಂತರ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಬಸವನ ಉತ್ಸವ, ಧೂಪದ ಸೇವೆ ಹಾಗೂ ಮಲ್ಲೇಶ್ವರ ವೀರಗಾಸೆ ಯುವಕ ಸಂಘದಿಂದ ವೀರಗಾಸೆ ಕುಣಿತ ನಡೆಯಿತು. ಈ ವೇಳೆ ದೇವಾಲಯ ಸಮಿತಿಯವರು, ಗುಡಿಗೌಡರು ಸೇರಿದಂತೆ ಸುತ್ತಮುತ್ತಲ ಹತ್ತಾರು ಹಳ್ಳಿಯವರು ಆಗಮಿಸಿದ್ದು ಸ್ವಾಮಿಯ ರಥೋತ್ಸವವನ್ನು ಕಣ್ತುಂಬಿಕೊಂಡರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ