ಹುಳಿಯಾರು ಹೋಬಳಿ ಗಾಣಧಾಳು ಸಮೀಪದ ಗುರುವಾಪುರದ ಶ್ರೀಕರಿಯಮ್ಮದೇವರ ಜಾತ್ರಾಮಹೋತ್ಸವ ತೋಟದಮನೆಗಳಲ್ಲಿ ಮಡಿಲಕ್ಕಿ ಸೇವೆಯೊಂದಿಗೆ ಗುರುವಾರ ಚಾಲನೆಗೊಂಡಿತು.
ತಾ.೩ರ ಶುಕ್ರವಾರ ಗ್ರಾಮದಲ್ಲಿ ಮಡಿಲಕ್ಕಿ ಸೇವೆ,ಸಂಜೆ ಅಂಕುರಾರ್ಪಣೆ ನಡೆಯಲಿದೆ. ನಂತರ ಯರೇಹಳ್ಳಿ ಕೆಂಪಮ್ಮದೇವಿ,ಚಿಕ್ಕಬ್ಯಾಲದಕೆರೆ ಕರಿಯಮ್ಮದೇವರುಗಳ ಆಗಮದೊಂದಿಗೆ ಕೂಡುಭೇಟಿ ಹಾಗೂ ಗಂಗಾಸ್ನಾನ ನಡೆಯಲಿದೆ. ತಾ.೪ರ ಶನಿವಾರ ಮುಂಜಾನೆ ಹೊಳೆಸೇವೆಯೊಂದಿಗೆ ಕಳಸ ಸಮೇತ ನಡೆಮುಡಿಯಲ್ಲಿ ಆಗಮಿಸಿ ಅಗ್ನಿಕುಂಡೋತ್ಸವ ನಡೆಯಲಿದೆ. ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಹಾಗೂ ಬಾನ ಜರುಗಲಿದೆ. ಅದೇ ದಿನ ರಾತ್ರಿ ಅಮ್ಮನವರ ರಥೋತ್ಸವ ಹಾಗೂ ತುಮಕೂರಿನ ಲಹರಿ ಮೆಲೋಡಿಸ್ ಅವರಿಂದ ರಸಮಂಜರಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ತಾ.೫ರ ಭಾನುವಾರ ಬೆಳಿಗ್ಗೆ ಸಿಡಿ, ಸಂಜೆ ಓಕಳಿ,ಮಹಾಮಂಗಳಾರತಿ,ಧ್ವಜಾವರೋಹಣ ನಡೆಯುವ ಮೂಲಕ ಜಾತ್ರೆಗೆ ತೆರೆ ಬೀಳಲಿದ್ದು ಗ್ರಾಮದ ಸುತ್ತಮುತ್ತಲ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಸಮಿತಿಯವರು ಕೋರಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ