ಹುಳಿಯಾರು ಸಮೀಪದ ಬಳ್ಳೇಕಟ್ಟೆಯ ಶ್ರೀ ಸಂಕಷ್ಟಹರ ಮಹಾಗಣಪತಿಯ ದೇವಸ್ಥಾನದ ಪ್ರಥಮ ವಾರ್ಷಿಕೋತ್ಸವ ಸಮಾರಂಭದ ಅಂಗವಾಗಿ ಎರಡು ದಿನಗಳ ಕಾಲ ಹೋಮಹವನಾದಿಗಳು ನಡೆದು ಅನ್ನಸಂತರ್ಪಣೆ ಮಾಡಲಾಯಿತು.
ಹುಳಿಯಾರು ಸಮೀಪದ ಬಳ್ಳೇಕಟ್ಟೆಯ ಶ್ರೀಸಂಕಷ್ಟಹರ ಮಹಾಗಣಪತಿಯ ದೇವಸ್ಥಾನದ ಪ್ರಥಮ ವಾರ್ಷಿಕೋತ್ಸವ ಸಮಾರಂಭದ ಅಂಗವಾಗಿ ಗಣೇಶನ ವಿಗ್ರಹಕ್ಕೆ ಅಭಿಷೇಕ ನಡೆಸಲಾಯಿತು |
ಶುಕ್ರವಾರ ಸಂಜೆ ಕೆಂಪಮ್ಮದೇವಿಯ ಆಗಮನದೊಂದಿಗೆ ಪೂಜಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಶನಿವಾರ ಮುಂಜಾನೆ ಪುಣ್ಯಾಹ, ಗಂಗಾಪೂಜೆ ನಡೆದು ವಾದ್ಯಘೋಷದೊಂದಿಗೆ ನಡೆಮುಡಿಯಲ್ಲಿ ದೇವಾಲಯಕ್ಕೆ ಕರೆತರಲಾಯಿತು. ಕರುವಗಲ್ಲು ಪೂಜೆ,ದೇವನಾಂದಿ,ಕಳಸಸ್ಥಾಪನೆ ಮಾಡಿ ನವಗ್ರಹಾರಾಧನೆ, ವಿನಾಯಕನಿಗೆ ಏಕವಾರ ರುದ್ರಾಭಿಷೇಕ ನಡೆಸಲಾಯಿತು. ಮಂಜುನಾಥ ಶರ್ಮ, ಕೃಷ್ಣ, ರವಿಕುಮಾರ್, ನಾಗರಾಜು ಅವರ ಪೌರೋಹಿತ್ಯದಲ್ಲಿ ನವಗ್ರಹ ಹೋಮ,ಮಹಾಗಣಪತಿ ಹೋಮ,ಮಹಾಲಕ್ಷ್ಮಿಹೋಮ ನಡೆಯಿತು. ನಂತರ ಪೂರ್ಣಾಹುತಿ, ಮಹಾಮಂಗಳಾರತಿ ನಡೆದು ಆಗಮಿಸಿದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಈ ವೇಳೆ ಪ್ರಸನ್ನ ಮಹಾಗಣಪತಿ ದೇವಸ್ಥಾನ ಅಭಿವೃದ್ಧಿ ಟ್ರಸ್ಟ್ ನ ಸದಸ್ಯರು ಹಾಗೂ ಬಳ್ಳೇಕಟ್ಟೆಯ ಸಾರ್ವಜನಿಕರು ಆಗಮಿಸಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ