ಹುಳಿಯಾರು ಇಲ್ಲಿನ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಅಂಗವಾಗಿ ಸಮಕಾಲಿನ ಸಂದರ್ಭ ಹಾಗೂ ಅಂಬೇಡ್ಕರ್ ಬಗ್ಗೆ ವಿಚಾರಗೊಷ್ಠಿ ನಡೆಯಿತು.
ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಅಂಗವಾಗಿ ಸಮಕಾಲಿನ ಸಂದರ್ಭ ಹಾಗೂ ಅಂಬೇಡ್ಕರ್ ಬಗ್ಗೆ ವಿಚಾರಗೊಷ್ಠಿ ನಡೆಯಿತು. |
ಈ ಸಮಕಾಲಿನ ಸಂದರ್ಭದಲ್ಲಿ ಅಂಬೇಡ್ಕರ್ ವಿಚಾರಧಾರೆ ಎಷ್ಟು ಪ್ರಸ್ತುತ ಎಂಬುದರ ಬಗ್ಗೆ ಉಪನ್ಯಾಸಕ ಹನುಂತಪ್ಪ ಮಾತನಾಡಿ ಮಹಾನ್ ಚಿಂತಕರಾದ ಅಂಬೇಡ್ಕರ್ ಅವರ ವಿಚಾರಧಾರೆಗಳು ಘೋಷಣೆಯಾಗದೆ ಬದುಕಾಗಬೇಕು, ಸಾಮಾಜಿಕ ಸುಧಾರಣೆಯ ಅಸ್ತ್ರವಾಗಬೇಕು ಎಂದರು.
ಅಂಬೇಡ್ಕರ್ ಕೇವಲ ಸಂವಿಧಾನ ರಚಿಸಿದವರು ಎನ್ನುವುದಕ್ಕೆ ಮಾತ್ರ ಒತ್ತುಕೊಡದೆ ಅವರ ವಿಚಾರಧಾರೆಗಳನ್ನು ವಿದ್ಯಾರ್ಥಿಗಳಿಗೆ ತಿಳಿಹೇಳುವ ಕಾರ್ಯ ಆಗಬೇಕು ಎಂದರು. ಈ ವೇಳೆ ಕನ್ನಡ ಉಪನ್ಯಾಸಕ ಶಂಕರಲಿಂಗಯ್ಯ, ಕಾಲೇಜಿನ ಅಧೀಕ್ಷಕ ಹೀಮಂತರಾಜು,ಉಪನ್ಯಾಸಕರುಗಳಾದ ಶ್ರೀನಿವಾಸಪ್ಪ, ಸೈಯ್ಯದ್ ಇಬ್ರಾಹಿಂ, ದೈಹಿಕ ನಿರ್ದೇಶಕ ಶಿವಯ್ಯ, ಗ್ರಂಥಪಾಲಕ ಲೋಕೇಶ್ ಸೇರಿದಂತೆ ಸಿಬ್ಬಂದಿಯವರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ