ಹುಳಿಯಾರು ಪಟ್ಟಣದ ಪುರಾಣ ಪ್ರಸಿದ್ದ ಶ್ರೀ ಅನಂತಶಯನ ರಂಗನಾಥಸ್ವಾಮಿಗೆ ಅಮವಾಸ್ಯೆ ಅಂಗವಾಗಿ ವಿಶ್ವನಾಥ್,ಧನಂಜಯ,ವಾಸುದೇವ್, ಅಂಜನ್ ಕುಮಾರ್ ಸೇವಾರ್ಥದಲ್ಲಿ ರಂಗನಾಥಸ್ವಾಮಿಗೆ ಗಂಧದ ಲೇಪನದಿಂದ ಅಲಂಕಾರ ಮಾಡಲಾಗಿತ್ತು.
ಹುಳಿಯಾರಿನ ಶ್ರೀಅನಂತಶಯನ ರಂಗನಾಥಸ್ವಾಮಿಗೆ ಮಾಡಿರುವ ಗಂಧದ ಅಲಂಕಾರ. |
ಅಮವಾಸ್ಯೆ ಪೂಜೆ ಅಂಗವಾಗಿ ಸ್ವಾಮಿಗೆ ಅಭಿಷೇಕ ನಡೆದು ವಿಶೇಷ ಅಲಂಕಾರ ಮಾಡಿ ಪೂಜಾ ಕೈಂಕರ್ಯ ನಡೆಸಲಾಯಿತು. ವೆಂಕಟಾದ್ರಿ ಭಜನಾ ಮಂಡಳಿಯವರು ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು. ರಂಗನಾಥಸ್ವಾಮಿಗೆ ಪೂಜೆ ಸಲ್ಲಿಸಲು ಪಟ್ಟಣದ ಅಪಾರ ಸಂಖ್ಯೆಯ ಭಕ್ತಾಧಿಗಳು ಆಗಮಿಸಿದ್ದು ಅಲಂಕೃತ ಸ್ವಾಮಿಯ ದರ್ಶನ ಪಡೆದರು.ಆಗಮಿಸಿದ ಭಕ್ತಾಧಿಗಳಿಗಾಗಿ ಪ್ರಸಾದ ವ್ಯವಸ್ಥೆ ಮಾಡಿದ್ದು, ದೇವಾಲಯ ಜಿರ್ಣೋದ್ದಾರ ಸಮಿತಿಯ ಟಿ.ಆರ್.ರಂಗನಾಥ ಶೆಟ್ರು,ಜಗನಾಥ ರಾವ್,ಆರ್ಚಕ ರಾಜಣ್ಣ,ಶೇಷಣ್ಣ, ಗ್ರಾ.ಪಂ.ಸದಸ್ಯರಾದ ರಂಗನಾಥ್,ಅಶೋಕ್ ಬಾಬು,ಗೀತಾಬಾಬು, ಸೇರಿದಂತೆ ಇತರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ