ಈಗಾಗಲೇ ಜಾತಿಗಣತಿ ಪ್ರಾರಂಭವಾಗಿದ್ದು ಗಣತಿದಾರರು ಮನೆಮನೆಗಳಿಗೆ ತೆರಳಿ ಮನೆಯವರಿಂದ ಮಾಹಿತಿ ಪಡೆಯುತ್ತಿದ್ದು ಬ್ರಾಹ್ಮಣ ಸಮುದಾಯದವರು ತಮ್ಮಲ್ಲಿನ ಒಗ್ಗಟ್ಟನು ಬಲಪಡಿಸುವ ನಿಟ್ಟಿನಲ್ಲಿ ಯಾವುದೇ ಉಪಜಾತಿ,ಪಂಗಡಗಳನ್ನು ನಮೂದಿಸದೆ "ಬ್ರಾಹ್ಮಣ" ಎಂದಷ್ಟೇ ನಮೂದಿಸುವಂತೆ ಚಿಕ್ಕನಾಯಕನಹಳ್ಳಿ ತಾಲ್ಲೂಕು ವಿಪ್ರ ಹಿತರಕ್ಷಣಾ ವೇದಿಕೆಯ ಕಾರ್ಯದರ್ಶಿ ಮಧುಸೂಧನ್ ರಾವ್ ಮನವಿ ಮಾಡಿದ್ದಾರೆ.
ಗಣತಿದಾರರು ಬ್ರಾಹ್ಮಣ ಸಮುದಾಯದವರ ಮನೆ ಬಂದಾಗ ಕಾಲಂ ೬ರಲ್ಲಿ ಜಾತಿ ಎಂಬಲ್ಲಿ ಬ್ರಾಹ್ಮಣ ಸಂಖ್ಯೆ ೦೨೦೦ ಎಂದು ಮಾತ್ರ ನಮೂದಿಸಿ ಕಾಲಂ ೭ ಮತ್ತು ೮ ರಲ್ಲಿ ಯಾವುದೇ ಉಪಜಾತಿ ಪರ್ಯಾಯ ಹೆಸರನ್ನು ನಮೂದಿಸದಂತೆ ಅವರು ತಿಳಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ