ಹುಳಿಯಾರು ಹೋಬಳಿ ಹೊಸಹಳ್ಳಿ ಪಾಳ್ಯದ ಶ್ರೀರಾಮ ಕೃಪಾಪೋಷಿತ ನಾಟಕ ಮಂಡಳಿಯ ಕಲಾವಿದರು ಮನೋಜ್ಞವಾಗಿ ಅಭಿನಯಿಸಿದ ಸಂಪೂರ್ಣ ರಾಮಾಯಣ ನಾಟಕವನ್ನು ನೋಡಲು ಗ್ರಾಮದ ಸುತ್ತಮುತ್ತಲ ಹಳ್ಳಿಗರು ಸೇರಿದಂತೆ ಹುಳಿಯಾರು,ಲಿಂಗಪ್ಪನಪಾಳ್ಯ,ಕೆಂಕೆರೆ ಗ್ರಾಮದವರು ಆಗಮಿಸಿದ್ದರು.
ಹುಳಿಯಾರು ಹೋಬಳಿ ಹೊಸಹಳ್ಳಿ ಪಾಳ್ಯದ ಶ್ರೀರಾಮ ಕೃಪಾಪೋಷಿತ ನಾಟಕ ಮಂಡಳಿಯ ಕಲಾವಿದರು ಸಂಪೂರ್ಣ ರಾಮಾಯಣ ನಾಟಕವನ್ನು ಮನೋಜ್ಞವಾಗಿ ಅಭಿನಯಿಸಿದರು. |
ಈ ಗ್ರಾಮದಲ್ಲಿ ರಾಮನವಮಿ ಸಮಯದಲ್ಲಿ ಸಂಪೂರ್ಣ ರಾಮಾಯಣ ನಾಟಕವನ್ನು ಕಳೆದ ಹಲವಾರು ವರ್ಷದಿಂದ ಅಭಿನಯಿಸಿ ಕೊಂಡುಬರುತ್ತಿದ್ದು ಅದರಂತೆಯೇ ಈ ಬಾರಿಯೂ ಸಹ ಅಭಿನಯಿಸಿದ್ದಾರೆ. ಇಂದಿನ ದಿನದಲ್ಲಿ ಸಿನಿಮಾ, ಧಾರವಾಹಿ ನೋಡುವ ಜನ ಹೆಚ್ಚಿದ್ದಾಗ್ಯೂ ಸಹ ಈ ಗ್ರಾಮದಲ್ಲಿ ನಡೆಯುವ ರಾಮಾಯಣ ನಾಟಕವನ್ನು ಊರಿನ ಜನರೆಲ್ಲಾ ಮನೆಮಂದಿ ಸಮೇತ ಬಂದು ವೀಕ್ಷಿಸಿದ್ದಲ್ಲದೆ, ಸುತ್ತಮುತ್ತಲಿನ ಹೆಚ್ಚಿನ ಸಂಖ್ಯೆಯ ಜನ ಆಗಮಿಸಿದ್ದರು. ನಮ್ಮ ಗ್ರಾಮದಲ್ಲಿ ಆಂಜನೇಯಸ್ವಾಮಿಯ ಭಕ್ತರು ಹೆಚ್ಚಿದ್ದು ಪ್ರತಿವರ್ಷ ರಾಮನವಮಿಯನ್ನು ತಪ್ಪದೇ ಆಚರಿಸುತ್ತೇವೆ ಹಾಗೂ ಸಂಪೂರ್ಣ ರಾಮಾಯಣ ನಾಟವನ್ನು ಅಭಿನಯಿಸುತ್ತಿದ್ದೇವೆ. ರಾತ್ರಿ ೧೦ಕ್ಕೆ ಶುರುವಾದರೆ ಬೆಳಗಿನ ಜಾವದವರೆಗೂ ನಡೆಯುವ ನಾಟಕಕ್ಕೆ ಗ್ರಾಮದ ಜನರ ಸಹಕಾರವೂ ಇದೆ ಎಂದು ರಾಮನ ಪಾತ್ರಧಾರಿ ಸುಗಂಧರಾಜು ತಿಳಿಸಿದರು.
ಹೊಸಹಳ್ಳಿಯ ಶ್ರೀನಿವಾಸ್ ಅವರ ಸಹನಿರ್ದೇಶನದಲ್ಲಿ , ನಂದಿಹಳ್ಳಿ ರಾಜಣ್ಣ ಅವರ ಸಂಗೀತ ನಿರ್ದೇಶನ, ತಮ್ಮಯ್ಯ,ಕೊಟ್ಟುರಪ್ಪ,ಕೆಂಕೆರೆಚನ್ನಬಸವಯ್ಯ, ಸೋಮಶೇಖರ್, ಚಂದ್ರಯ್ಯ ಅವರ ವಾದ್ಯವೃಂದಲ್ಲಿ ಹೊಸಹಳ್ಳಿಪಾಳ್ಯದ ಕಲಾವಿದರು ರಾಮಾಯಣ ನಾಟಕವನ್ನು ಅಭಿನಯಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ