ಹುಳಿಯಾರು ಹೋಬಳಿ ವ್ಯಾಪ್ತಿಯ ಎಲ್ಲಾ ಶಾಲಾ ಕಾಲೇಜು ಹಾಗೂ ಸರ್ಕಾರಿ ಕಚೇರಿಗಳಲ್ಲಿ ಮಂಗಳವಾರ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ೧೨೪ನೇ ಜಯಂತಿಯನ್ನು ಆಚರಿಸಲಾಯಿತು.
ಪಟ್ಟಣದ ಗ್ರಾ.ಪಂಯಲ್ಲಿ ಅಧ್ಯಕ್ಷೆ ಕಾಳಮ್ಮ ಅವರ ಸಮ್ಮುಖದಲ್ಲಿ ಅಂಬೇದ್ಕರ್ ಜಯಂತಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಅಂಬೇಡ್ಕರ್ ವ್ಯಕ್ತಿತ್ವದ ಬಗ್ಗೆ ಗುಣಗಾನ ಮಾಡಿದರು. ಪಿಡಿಓ ಅಡವೀಶ್ ಕುಮಾರ್,ಉಪಾಧ್ಯಕ್ಷೆ ಅಭಿದುನ್ನಿಸಾ, ಸದಸ್ಯರಾದ ಜಹೀರ್ ಸಾಬ,ವೆಂಕಟಮ್ಮ ಸೇರಿದಂತೆ ಸಿಬ್ಬಂದಿಯವರು ಉಪಸ್ಥಿತರಿದ್ದರು.
ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮದ ಆಂಬೇಡ್ಕರ್ ಯುವಕ ಸಂಘದವತಿಯಿಂದ ಅಂಬೇಡ್ಕರ್ ಭಾವಚಿತ್ರದ ಮೆರವಣಿಗೆ ಮಾಡಿದರು. |
ಹೋಬಳಿಯ ಕೆಂಕೆರೆ ಗ್ರಾಮದಲ್ಲಿ ಅಂಬೇಡ್ಕರ್ ಯುವಕ ಸಂಘದವತಿಯಿಂದ ಅಂಬೇಡ್ಕರ್ ಜಯಂತಿ ಆಚರಿಸಿ ಅಂಬೇಡ್ಕರ್ ಅವರ ಭಾವಚಿತ್ರವನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಜೈಕಾರ ಹಾಕುತ್ತಾ ಮೆರವಣಿಗೆ ಮಾಡಿದರು. ಈವೇಳೆ ಸಂಘದ ಕೆ.ಜೆ.ಮಂಜುನಾಥ್ ಮಾತನಾಡಿ , ಸಮಾಜದಲ್ಲಿ ಹಿಂದುಳಿದ ಹಾಗೂ ಶೋಷಿತ ವರ್ಗದ ಅಭ್ಯುದಯಕ್ಕಾಗಿ ಶ್ರಮಿಸಿದ ಹಾಗೂ ದೇಶದ ಆಡಳಿತ ವ್ಯವಸ್ಥೆಗೆ ಪೂರಕವಾದ ಸಂವಿಧಾನ ರಚನೆಗೆ ಭದ್ರ ಬುನಾದಿ ಹಾಕಿ ಸಂವಿಧಾನ ಶಿಲ್ಪಿ ಎಂಬ ಹೆಗ್ಗಳಿಕೆ ಪಡೆದ ಮಹಾನ್ ವ್ಯಕ್ತಿಯಾಗಿದ್ದಾರೆ. ಕಳೆದ ಹತ್ತಾರು ವರ್ಷಗಳ ಹಿಂದೆ ಸಮಾಜದಲ್ಲಿ ಜಾತಿಪದ್ದತಿ ವ್ಯವಸ್ಥೆಯಿಂದಾಗಿ ಮೇಲು-ಕೀಳು ಎಂಬ ಬೇಧಭಾವ ಬೆಳೆದು ತಾರತಮ್ಯತೆ ಉಂಟಾಗಿತ್ತು. ಕೆಲ ಜಾತಿಯ ಜನ ತಮ್ಮದೇ ಆದ ಕಾರ್ಯವನ್ನು ಮಾಡಬೇಕೆಂಬ ಕಟ್ಟುಪಾಡುಗಳು ಸಹ ಇದ್ದವು. ಅಂತಹ ಸನ್ನಿವೇಶದಲ್ಲಿ ಅಂಬೇಡ್ಕರ್ ಜಾತಿಪದ್ದತಿಯ ವಿರುದ್ದ ಧ್ವನಿ ಎತ್ತಿ ಸಮಾಜದ ಎಲ್ಲಾ ವರ್ಗದವರಿಗೂ ಸಮಾಜದಲ್ಲಿ ಸ್ಥಾನ ಕಲ್ಪಿಸುವಲ್ಲಿ ಮುಂದಾದರು. ಅಂಬೇಡ್ಕರ್ ಸಂವಿಧಾನವನ್ನು ಜಾರಿಗೆ ತರುವ ಮೂಲಕ ದೇಶಕ್ಕೆ ತಮ್ಮದೇ ಆದಕೊಡುಗೆ ನೀಡಿದ್ದಾರೆ ಅವರ ಆದರ್ಶಗುಣಗಳನ್ನು ಇಂದಿನ ಯುವಜನತೆ ಮೈಗೂಡಿಸಿಕೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ಮನು,ಕುಮಾರಸ್ವಾಮಿ, ಮಲ್ಲೇಶ್, ಷಡಾಕ್ಷರಿ, ಪ್ರವೀಣ್,ರಘು,ಪುನಿತ್,ಅರುಣ್,ಕಿರಣ್,ರಮೇಶ್ ಇತರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ