ಡಿವಿಜಿಯವರ ಮಂಕುತಿಮ್ಮನ ಕಗ್ಗ ಮತ್ತು ಮರುಳಮುನಿಯನ ಕಗ್ಗ ಕೃತಿಗಳು ಕನ್ನಡದ ಭಗವದ್ಗೀತೆ ಇದ್ದಂತೆ ಎಂದು ತಮ್ಮಡಿಹಳ್ಳಿಯ ಸರ್ಕಾರಿ ಶಾಲೆಯ ಮುಖ್ಯಶಿಕ್ಷಕ ಜಯಣ್ಣ ತಿಳಿಸಿದರು.
ಪಟ್ಟಣದ ವಸಂತನಗರ ಬಡಾವಣೆಯ ಎಸ್.ಶಿವರಾಂ ಅವರ ನಿವಾಸದಲ್ಲಿ ನಡೆದ ಹುಳಿಯಾರು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಡೆಸಿಕೊಂಡು ಬರುತ್ತಿರುವ ಮನೆಮನೆಗಳಲ್ಲಿ ಪಾಕ್ಷಿಕ ಕನ್ನಡಕವಿಕಾವ್ಯ ಗೋಷ್ಠಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
"ಬದುಕು ಜಟಕಾಬಂಡಿ", "ತಿದ್ದಿಕೊಳೊ ನಿನ್ನ ನೀಂ, ಜಗವ ತಿದ್ದುವುದಿರಲಿ", "ಋಣದ ಮೂಟೆಯ ಹೊರಿಸಿ " ಎಂಬ ಕವಿತೆಗಳನ್ನು ಉಲ್ಲೇಖಿಸುತ್ತ ಜೀವನದಲ್ಲಿ ಮಾನವ ಎಂತಹ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂಬುದರ ಬಗ್ಗೆ ತಿಳಿಸಿದರು.
ಶಿಕ್ಷಕ ಮಧು ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದು, ಕಸಾಪದ ತ.ಶಿ.ಬಸವಮೂರ್ತಿ, ಯಲ್ಲಪ್ಪ,ತಮ್ಮಯ್ಯ ಮಾತನಾಡಿದರು. ಸಂಗೀತ ಶಿಕ್ಷಕ ಶಂಕರ್ ಶರಣರ ವಚನಗಳನ್ನು ಹಾಡಿದರು. ಶಿವರಾಂ ಸ್ವಾಗತಿಸಿ, ಶಿಕ್ಷಕ ದಯಾನಂದ್ ನಿರೂಪಿಸಿ, ಕ್ಯಾತಯ್ಯ ವಂದಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ