ಪಟ್ಟಣದ ಪ್ರಾಥಮಿಕ ಆರೋಗ್ಯಕೇಂದ್ರದಲ್ಲಿ ಹತ್ತಾರೂ ಸಮಸ್ಯೆಗಳಿದ್ದು ತಾವು ಖುದ್ದು ಭೇಟಿ ನೀಡಿ ಇಲ್ಲಿನ ಸ್ಥಿತಿಗತಿಗಳ ಬಗ್ಗೆ ಅವಲೋಕಿಸಿ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ತಮ್ಮನ್ನು ಸಂಪರ್ಕಿಸುವಂತೆ ಸಂಸದ ಎಸ್.ಪಿ.ಮುದ್ದಹನುಮೇಗೌಡ ಜಿಲ್ಲಾ ಆರೋಗ್ಯಾಧಿಕಾರಿ ಶಶಿಕಲಾ ಅವರಿಗೆ ತಾಕೀತು ಮಾಡಿದರು.
ಹುಳಿಯಾರಿನ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕ ಆಸ್ಪತ್ರೆಯ ಸಮಸ್ಯೆ ಆಲಿಸಿ ಖುದ್ದು ಸ್ಥಳಕ್ಕೆ ಭೇಟಿ ನೀಡಿದ ಸಂಸದರು ಇಲ್ಲಿನ ಹತ್ತು ಹಲವಾರು ಸಮಸ್ಯೆಗಳನ್ನು ಕಣ್ಣಾರೆ ಕಂಡು ವೈದ್ಯಾಧಿಕಾರಿ ಸದಾಶಿವು ಅವರನ್ನು ತರಾಟೆಗೆ ತೆಗೆದುಕೊಂಡರು.
ತಾವು ಗುತ್ತಿಗೆ ವೈದ್ಯರಾಗಿದ್ದು ಎಲ್ಲಕ್ಕೂ ತಾಲ್ಲೂಕು ವೈದ್ಯಾಧಿಕಾರಿಗಳನ್ನು ಕೇಳಬೇಕು ಎಂಬ ಅವರ ಉತ್ತರದಿಂದ ಕನಲಿದ ಸಂಸದರು ಕೂಡಲೇ ದೂರವಾಣಿ ಮೂಲಕ ಡಿ.ಎಚ್.ಈ ಅವರನ್ನು ಸಂಪರ್ಕಿಸಿ ಹುಳಿಯಾರಿಗೆ ಭೇಟಿನೀಡಿ ಇಲ್ಲಿನ ಸಮಸ್ಯೆಗಳನ್ನು ಬಗೆ ಹರಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುವಂತೆ ಸೂಚಿಸಿದರು.
ಈ ವೇಳೆ ಸಾಸಲು ಸತೀಶ್,ವೈ,ಸಿ.ಸಿದ್ದರಾಮಣ್ಣ, ಹೊಸಹಳ್ಳಿ ಅಶೋಕ್, ಕೆಂಕೆರೆ ಶಿವಕುಮಾರ್ ಇತರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ