ಹುಳಿಯಾರು ಪಟ್ಟಣದ ಬೀರದೇವರ ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿ ನಿತ್ಯ ನೂರಾರು ಜನ ಸಂಚರಿಸುವುದಲ್ಲದೆ ಹತ್ತಾರು ಅಂಗಡಿಗಳಿದ್ದು ಈ ರಸ್ತೆಬದಿಯ ಚರಂಡಿಯ ತುಂಬೆಲ್ಲಾ ಪ್ಲಾಸ್ಟಿಕ್ ಲೋಟ ಸೇರಿದಂತೆ ತ್ಯಾಜ್ಯವಸ್ತುಗಳು ತುಂಬಿ ಗಬ್ಬುವಾಸನೆ ಬರುತ್ತಿದ್ದರೂ ಸಹ ಗ್ರಾ.ಪಂ.ಯವರು ಸ್ವಚ್ಚಗೊಳಿಸುವಲ್ಲಿ ಮುಂದಾಗಿಲ್ಲವೆಂದು ಇಲ್ಲಿ ಸಂಚರಿಸುವ ಪಾದಾಚಾರಿಗಳು ಹಿಡಿಶಾಪ ಹಾಕುತ್ತಿದ್ದಾರೆ.
ಹುಳಿಯಾರಿನ ಬೀರಲಿಂಗೇಶ್ವರಸ್ವಾಮಿ ದೇವಾಲಯಕ್ಕೆ ಹೋಗುವ ರಸ್ತೆ ಬದಿಯ ಚರಂಡಿಯನ್ನು ತೋರಿಸುತ್ತಿರುವ ಅಂಗಡಿಯವ. |
ಪಟ್ಟಣದೆಲ್ಲೆಡೆ ಅನೈರ್ಮಲ್ಯತೆ ಹೆಚ್ಚಿದ್ದರೂ ಸಹ ಈ ಬಗ್ಗೆ ಗ್ರಾ.ಪಂ.ಸೂಕ್ತ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದ್ದಾರೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಈ ಚರಂಡಿಯನ್ನು ಸ್ವಚ್ಚಗೊಳಿಸಿ ತಿಂಗಳುಗಳೇ ಕಳೆದಿದ್ದು ಪೌರ ಕಾರ್ಮಿಕರಿಗೆ ಇದನ್ನು ತೋರಿಸಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಇಲ್ಲಿ ಸಂಚರಿಸುವವರು ಹಾಗೂ ಅಂಗಡಿದಾರರು ವಾಸನೆ ತಾಳಲಾರದೆ ಮೂಗುಮುಚ್ಚಿಕೊಳ್ಳುವಂತ ಸ್ಥಿತಿ ನಿರ್ಮಾಣವಾಗಿದೆ. ಚರಂಡಿ ತುಂಬ ಕಸಕಡ್ಡಿ,ಪ್ಲಾಸ್ಟಿಕ್ ಲೋಟ ಸೇರಿದಂತೆ ಇನ್ನಿತರ ವಸ್ತುಗಳು ತುಂಬಿರುವುದರಿಂದ ನೀರು ಹರಿಯದೆ ಅಲ್ಲಿಯೇ ನಿಂತು ಸೊಳ್ಳೆಗಳ ಹೆಚ್ಚಳಕ್ಕೆ ಕಾರಣವಾಗಿದೆ. ಶೀಘ್ರವೇ ಚರಂಡಿಯನ್ನು ಸ್ವಚ್ಚಗೊಳಿಸದೆ ಹೋದರೆ ಅನೈರ್ಮಲ್ಯತೆಯಿಂದ ರೋಗರುಜಿನೆಗಳು ಉಲ್ಬಣಿಸಲಿದ್ದು ಕೂಡಲೇ ಪಂಚಾಯ್ತಿಯವರು ಚರಂಡಿ ಸ್ವಚ್ಚಗೊಳಿಸುವಂತೆ ಅಂಗಡಿದಾರರು ಹಾಗೂ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ