ಕಾರು ಲಾರಿ ಮಧ್ಯೆ ಡಿಕ್ಕಿ ಸಂಭವಿಸಿ ಇಬ್ಬರು ಮಕ್ಕಳು ಸೇರಿದಂತೆ ಐದು ಮಂದಿಗೆ ಗಾಯವಾದ ಘಟನೆ ಪಟ್ಟಣ ಹೊರವಲಯದ ಪೋಚಕಟ್ಟೆ ಗೇಟ್ ಬಳಿ ಶುಕ್ರವಾರ ನಡೆದಿದೆ.
ಗಾಯಗೊಂಡವರು ಹೊಸದುರ್ಗ ತಾಲ್ಲೂಕು ಕಿಟ್ಟದಾಳ್ ಗ್ರಾಮದ ಶರತ್, ಪತ್ನಿ ರೀತು, ಅತ್ತೆ ಮಾಲಾ ಹಾಗೂ ಮಕ್ಕಳು ರಷ್ಮಿಕಾ, ದೀತಾ. ಕುಟುಂಬ ಸಮೇತ ತುಮಕೂರಿನಲ್ಲಿ ಜರುಗಿದ ಮದುವೆ ಕಾರ್ಯ ಮುಗಿಸಿಕೊಂಡು ಸ್ವಗ್ರಾಮಕ್ಕೆ ಹಿಂದಿರುಗುವ ವೇಳೆ ಈ ಘಟನೆ ಸಂಭವಿಸಿದೆ. ವೇಗವಾಗಿ ಬಂದ ಲಾರಿ ಕಾರಿಗೆ ಅಪ್ಪಳಿಸಿದ ಪರಿಣಾಮ ಸಂಪೂರ್ಣ ಜಖಂ ಗೊಂಡಿದೆ. ಮಗಳು ರಷ್ಮಿಕಾ ಚಾಲನೆ ಮಾಡುತ್ತಿದ್ದ ತಂದೆಯ ಬಳಿ ಕುಳಿತ್ತಿದ್ದರಿಂದ ತಲೆ ಭಾಗಕ್ಕೆ ಗಂಭೀರ ಗಾಯಗಳಾಗಿ ತುಮಕೂರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಉಳಿದವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಕಾರು ಸಂಪೂರ್ಣ ಜಖಂ ಗೊಂಡರು ಆಶ್ಚರ್ಯಕರ ರೀತಿಯಲ್ಲಿ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ಧಾರೆ. ಪ್ರಕರಣ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ