ಕಳೆದ ಹತ್ತು ವರ್ಷದಿಂದ ದಂಪತಿಗಳು ಗ್ರಾ.ಪಂ ಸದಸ್ಯತ್ವ , ಜಿ.ಪಂ.ಸದಸ್ಯತ್ವದ ಹೀಗೆ ಒಂದಲ್ಲೊಂದು ಸ್ಥಾನದ ಮೂಲಕ ರಾಜಕೀಯದಲ್ಲಿದ್ದು, ಸದ್ಯ ಪತ್ನಿ ಜಿ.ಪಂ.ಸದಸ್ಯೆಯಾಗಿದ್ದರೂ ಕೂಡ ಪತಿರಾಯ ಗ್ರಾ.ಪಂ ಚುನಾವಣೆಗೆ ಅಭ್ಯರ್ಥಿಯಾಗುವ ಮೂಲಕ ಚುನಾವಣಾ ಅಖಾಡಕ್ಕಿಳಿದಿದ್ದಾರೆ.
ಹುಳಿಯಾರು ಹೋಬಳಿ ಹೊಯ್ಸಳಕಟ್ಟೆ ಕ್ಷೇತ್ರದ ಜಿ.ಪಂ ಸದಸ್ಯೆಯಾಗಿರುವ ನಿಂಗಮ್ಮ ಅವರ ಪತಿ ಯರೆಕಟ್ಟೆಯ ವೈ.ಕೆ.ರಾಮಯ್ಯನವರು ಈ ಬಾರಿಯ ಗ್ರಾಮ ಪಂಚಾಯಿತಿ ಚುನಾವಣಾ ಕಣಕ್ಕಿಳಿಯುವುದರ ಮೂಲಕ ಮತ್ತೆ ಎಲ್ಲರ ಗಮನ ಸೆಳೆದಿದ್ದಾರೆ.
ಬರಕನಹಾಳ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸ್ವಂತ ಊರಾದ ಯರೇಕಟ್ಟೆ ಕ್ಷೇತ್ರದಿಂದ ಸಾಮಾನ್ಯ ಅಭ್ಯರ್ಥಿ ಮೀಸಲು ಸ್ಥಾನಕ್ಕೆ ಇವರು ಸ್ಪರ್ಧಿಸಿದ್ದು ಸ್ಪರ್ಧಿಸಿದ್ದು, ಈ ಹಿಂದೆ ಇದೇ ಕ್ಷೇತ್ರದಿಂದ 2 ಬಾರಿ ಸದಸ್ಯರಾಗಿ ಒಮ್ಮೆ ಗ್ರಾ.ಪಂ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು. ಹಾಲಿ ಜಿ.ಪಂ ಸದಸ್ಯೆಯಾಗಿರುವ ಇವರ ಪತ್ನಿ ಕೂಡ ಈಮುನ್ನಾ ಗ್ರಾಮ ಪಂಚಾಯಿತಿ ಸದಸ್ಯೆಯಾಗಿದ್ದು ನಂತರ ಜಿ.ಪಂ ಗೆ ಸ್ಪರ್ಧಿಸಿ ವಿಜೇತರಾದ ಬಳಿಕ ಗ್ರಾ.ಪಂ. ಸದಸ್ಯೆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಮಡದಿ ಜಿ.ಪಂ.ಸದಸ್ಯೆಯಾಗಿರುವ ಅಧಿಕಾರವಿದ್ದರೂ ಸಹ ಗಂಡ ಗ್ರಾ.ಪಂ. ಚುನಾವಣೆಗೆ ಸ್ಪರ್ಧಿಸಿದ್ದಾರಲ್ಲ ಎಂಬುದು ಸಾರ್ವಜನಿಕರ ಮಾತಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ