ದಿನದಿಂದ ದಿನಕ್ಕೆ ಕಾವೇರುತ್ತಿದ್ದ ಚುನಾವಣಾ ಪ್ರಚಾರಕ್ಕೆ ಕೆಂಡದಂತ ಬಿಸಿಲಿನ ತಾಪಕೂಡ ಸೇರಿ ಅಭ್ಯರ್ಥಿಗಳು ಹೈರಾಣಾಗಿದ್ದ ಸಮಯದಲ್ಲಿ ಶುಕ್ರವಾರ ಸಂಜೆ ಬಂದ ತಂಪೆರೆದಿದೆ.
ಕಳೆದೊಂದು ವಾರದಿಂದ ಬಿಸಿಲಿನ ತಾಪ ಜೋರಾಗಿದ್ದು ಸುಡುಬಿಸಿಲಿನಲ್ಲಿ ಪ್ರಚಾರ ಹೇಗಪ್ಪ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇಂತಹ ಸಮಯದಲ್ಲಿ ಬಂದಿರುವ ಮಳೆ ಇಳೆಯನ್ನು ತಂಪುಮಾಡಿದೆ. ಬಿಸಿಲ ದಗೆಯ ಹೆಚ್ಚಳ ಕಂಡ ಅಭ್ಯರ್ಥಿಗಳು ಬೆಳಿಗ್ಗೆ ಹಾಗೂ ಸಂಜೆ ಸಮಯದಲ್ಲಿ ತಮ್ಮ ಪ್ರಚಾರ ನಡೆಸುವಂತಾಗಿತ್ತು ಇದೀಗ ಮಳೆ ಬಂದು ತಂಪು ವಾತಾವರಣದಿಂದಾಗಿ ದಿನಪೂರ್ತಿಯ ಪ್ರಚಾರಕಾರ್ಯಕ್ಕೆ ನೆರವಾಗಿದೆ.
ಹೆಸರಿಗೆ ಸಹಕಾರಿ : ಕಳೆದ ಹತ್ತು ದಿನಗಳಿಂದ ಮಳೆಬಾರದೆ ಬಿಸಿಲ ಬೇಗೆಯಿಂದ ತತ್ತರಿಸಿ ಹೂ ಬಿಡುವ ಹಂತದಲ್ಲಿದ್ದ ಮುಂಗಾರು ಬೆಳೆ ಹೆಸರಿಗೆ ಶುಕ್ರವಾರ ಸಂಜೆ ಬಂದ ಸಹಕಾರಿಯಾಗಿದೆ.
ಈ ಹಿಂದೆ ಬಂದ ಪೂರ್ವ ಮುಂಗಾರು ಮಳೆಗೆ ಹೋಬಳಿ ವ್ಯಾಪ್ತಿಯ ಹಲವು ಹಳ್ಳಿಯ ರೈತರು ಹೆಸರು ಬಿತ್ತಿದ್ದರು. ನಂತರ ಕಾಲಕಾಲಕ್ಕೆ ಬಂದ ಮಳೆಯಿಂದಾಗಿ ಹೆಸರು ಹುಲುಸಾಗಿ ಬೆಳೆದು ನಳನಳಿಸುತ್ತಿತ್ತು ಆದರೆ ಕಳೆದ ಹತ್ತನ್ನೈರಡು ದಿನಗಳಿಂದ ಬಿಸಿಲ ಝಳ ಹೆಚ್ಚಿತ್ತೆ ಹೊರತು ಒಂದು ಹನಿ ಮಳೆ ಬಾರದೆಯಿದ್ದು ಯಾವಾಗ ಮಳೆ ಬರುತ್ತದೆ ಎಂದು ರೈತರು ಮುಗಿಲು ನೋಡುಂತಾಗಿತ್ತು.
ಹೆಸರು ಹೂಕಟ್ಟುವ ಸಮಯದಲ್ಲಿ ಒಂದು ಹದ ಮಳೆ ಬಂದರೆ ಸಾಕು ಎನ್ನುವ ನಿರೀಕ್ಷೆಯಲ್ಲಿದ್ದ ರೈತರಿಗೆ ಶುಕ್ರವಾರ ಬಂದ ಮಳೆ ನೆರವಾಗಿದ್ದು ಸದ್ಯ ಹೆಸರು ಗಿಡ ಬದುಕಿದವಲ್ಲಪ್ಪಾ ಎಂದು ನಿಟ್ಟುಸಿರು ಬಿಡುವಂತಾಗಿದೆ. ಬಿಸಿಲ ತಾಪದಿಂದ ಹಳದಿ ಎಲೆರೋಗದ ಬಾಯಿಗೆ ಹೆಸರು ತುತ್ತಾಗುವಂತಿದ್ದ ಸಮಯದಲ್ಲಿ ವರುಣ ಕೃಪೆ ತೋರಿದ್ದಾನೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ