ಜೂನ್ ೨ ರಂದು ೨ನೇ ಹಂತದಲ್ಲಿ ಗ್ರಾಮ ಪಂಚಾಯ್ತಿ ಚುನಾವಣೆ ನಡೆಯಲಿದ್ದು ಹುಳಿಯಾರು ಗ್ರಾ.ಪಂ.ಯ ೩೯ ಸ್ಥಾನಗಳ ಆಯ್ಕೆಗೆ ೧೬೨ ಮಂದಿ ಕಣದಲ್ಲಿದ್ದು ಅವರೆಲ್ಲರಿಗೂ ಗುರುತಿನ ಪತ್ರ ಹಾಗೂ ಏಣಿಕೆಯ ಏಜೆಂಟರ್ ಪತ್ರವನ್ನು ರಿಟರ್ನಿಂಗ್ ಆಫೀಸರ್ ಶಿವಾನಂದ್ ಶನಿವಾರ ವಿತರಿಸಿದರು.
ಗ್ರಾ.ಪಂ. ಚುನಾವಣ ಕಣದಲ್ಲಿರುವ ಅಭ್ಯರ್ಥಿಗಳು ಚುನಾವಣೆಯ ದಿನದಂದು ಹಾಗೂ ಮತ ಏಣಿಕೆಯ ದಿನದಂದು ಈ ಗುರ್ತಿನ ಪತ್ರವನ್ನು ಕಡ್ಡಾಯವಾಗಿದೆ. ತಮ್ಮ ಬ್ಲಾಕ್ ನ ಮತ ಕೇಂದ್ರದ ಒಳ ಪ್ರವೇಶಕ್ಕೆ ಹಾಗೂ ಏಣಿಕೆ ಕೊಠಡಿಯ ಪ್ರವೇಶಕ್ಕೆ ಈ ಗುರ್ತಿನ ಪತ್ರ ಕಡ್ಡಾಯವಾಗಿದ್ದು ಅಭ್ಯರ್ಥಿಗಳು ತಪ್ಪದೇ ತರುವಂತೆ ಸೂಚಿಸಿದ್ದಾರೆ. ಯಾವ ಅಭ್ಯರ್ಥಿಗಳಿಗೆ ಗುರ್ತಿನ ಪತ್ರ ದೊರೆತಿರುವುದಿಲ್ಲ ಅಂತಹವರು ಗ್ರಾ.ಪಂ. ಕಛೇರಿಗೆ ಬಂದು ಪಡೆಯುವಂತೆ ತಿಳಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ