ಮಸೀದಿಯನ್ನು ಉತ್ತಮ ಗುಣಮಟ್ಟದಲ್ಲಿ ನಿರ್ಮಿಸದ ಕಾರಣದಿಂದಾಗಿ ಸೋಮವಾರ ಸಂಜೆ ಬೀಸಿದ ಮಳೆಗಾಳಿಯ ಹೊಡೆತಕ್ಕೆ ಅದರ ಗೋಪುರಗಳು ಬೀಳುವಂತಾಗಿದೆ. ಇದಕ್ಕೆ ಕಾರಣರಾದವರ ಮೇಲೆ ಕ್ರಮ ಕೈಗೊಳ್ಳುವುದಾಗಿ ತುಮಕೂರು ಜಿಲ್ಲಾ ವಕ್ಫ್ ಸಲಹಾಸಮಿತಿ ಅಧ್ಯಕ್ಷ ಇಕ್ಬಾಲ್ ಅಹಮದ್ ತಿಳಿಸಿದರು.
ಮಳೆಗಾಳಿಗೆ ಸಿಕ್ಕಿ ನೆಲಕ್ಕುರುಳಿದ ಹುಳಿಯಾರು ಹೋಬಳಿ ಕಂಪನಹಳ್ಳಿಯ ಮಸೀದಿಯನ್ನು ಜಿಲ್ಲಾ ವಕ್ಫ್ ಸಲಹಾಸಮಿತಿಯ ಅಧ್ಯಕ್ಷ ಇಕ್ಬಾಲ್ ಅಹಮದ್ ವೀಕ್ಷಿಸಿದರು. |
ಹುಳಿಯಾರು ಹೋಬಳಿಯ ಕಂಪನಹಳ್ಳಿ(ಕರಡಿಸಾಬರಪಾಳ್ಯ)ದಲ್ಲಿ ಕಳೆದ ೨ ವರ್ಷದ ಹಿಂದ ನಿರ್ಮಿಸಿದ್ದ ಮಸೀದಿಯ ಗೋಪುರಗಳು ಸೋಮವಾರ ಸಂಜೆ ಬೀಸಿದ ಗಾಳಿಗೆ ಸಿಲುಗಿ ಧರೆಗುರುಳಿದ್ದನ್ನು ವೀಕ್ಷಿಸಲು ಮಂಗಳವಾರ ಆಗಮಿಸಿದ್ದ ಅವರು ಶಿಥಿಲಗೊಂಡಿದ್ದ ಮಸೀದಿಯ ವಸ್ತು ಸ್ಥಿತಿಯನ್ನು ವೀಕ್ಷಿಸಿ ಮಾತನಾಡಿದರು.
ಮಸೀದಿ ನಿರ್ಮಿಸಲು ಗುತ್ತಿಗೆ ಪಡೆದಿದ್ದ ಗುತ್ತಿಗೆದಾರ ಅದರ ಪ್ಲಾನ್ ಅನ್ನು ಇಂಜಿನಿಯರ್ ಅವರಿಂದ ಪರಿಶೀಲಿಸದೆ ತನ್ನಿಷ್ಟದಂತೆ ನಿರ್ಮಿಸಿದ್ದಾನೆ. ಇದಕ್ಕೆ ಬಳಸಿರುವ ವಸ್ತುಗಳು ಸಹ ಕಳಪೆಯಿಂದ ಕೂಡಿದ್ದರ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎಂದರು. ಈ ಬಗ್ಗೆ ಚಿ.ನಾ.ಹಳ್ಳಿ ತಹಸೀಲ್ದಾರ್ ಅವರನ್ನು ಭೇಟಿ ಮಾಡಿ ಪರಿಹಾರ ನೀಡುವಂತೆ ಮನವಿ ಮಾಡುವುದಾಗಿ ತಿಳಿಸಿದರು. ಮುಂದಿನ ದಿನಗಳಲ್ಲಿ ಮಸೀದಿಗಳ ನಿರ್ಮಾಣದ ಪ್ಲಾನನ್ನು ಎಂಜಿನೀಯರ್ ಅವರಿಂದ ಪರಿಶೀಲಿಸಿ ನಂತರ ಕಾಮಗಾರಿ ಮಾಡಿಸುವಂತೆ ತಿಳಿಸಿದರು.
ಸದ್ಯ ಶಿಥಿಲವಾಗಿರುವ ಮಸೀದಿಯನ್ನು ಪಿ.ಡಬ್ಯೂಡಿ ಎಂಜಿನೀಯರ್ ಅವರಿಂದ ಅದರ ಗುಣಮಟ್ಟವನ್ನು ಪರಿಶೀಲಿಸಿ ನಂತರ ಇದು ಶಿಥಿಲವಾಗಿದೆ ಎಂದು ಕಂಡುಬಂದಲ್ಲಿ ಸಂಪೂರ್ಣವಾಗಿ ಕೆಡವಿ ಇದೇ ಸ್ಥಳದಲ್ಲಿ ನೂತನ ಮಸೀದಿ ನಿರ್ಮಿಸಲು ರಾಜ್ಯ ಹಾಗೂ ಜಿಲ್ಲಾ ವಕ್ಫ್ ಮಂಡಳಿಯಿಂದ ಹಾಗೂ ಸಚಿವಾಲಯದಿಂದ ಪರಿಹಾರ ಕೊಡಿಸುವುದಾಗಿ ತಿಳಿಸಿದರು. ಶಾಸಕರು, ಸಂಸದರು ಈ ಬಗ್ಗೆ ಗಮನ ಹರಿಸಬೇಕಿದೆ ಎಂದರು.
ಈ ವೇಳೆ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಉಪಾಧ್ಯಕ್ಷ ಆಕ್ರಂವುಲ್ಲಾ, ನಿರ್ದೇಶಕ ಜಬೀಉಲ್ಲಾ, ಮುಖಂಡರಾದ ಜಹೀರ್ ಸಾಬ್, ಇಮ್ರಾಜ್, ಕೆಂಕೆರೆ ಪಿಡಿಓ ಮೆಹಬೂಬ್ ಸೇರಿದಂತೆ ಇತರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ