೨೦೧೪-೧೫ನೇ ಸಾಲಿನ ಸಿಬಿಎಸ್ ಸಿ ಫಲಿತಾಂಶ ಗುರುವಾರದಂದು ಪ್ರಕಟವಾಗಿದ್ದು ಹುಳಿಯಾರಿನ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಸ್ಕೂಲ್ ಗೆ ಶೇ. ೧೦೦ ರಷ್ಟು ಫಲಿತಾಂಶ ಬಂದಿರುವುದಾಗಿ ಸಂಸ್ಥೆಯ ಕಾರ್ಯದರ್ಶಿ ಕವಿತಾ ಕಿರಣ್ ಕುಮಾರ್ ತಿಳಿಸಿದ್ದಾರೆ.
ಪರೀಕ್ಷೆಗೆ ಕುಳಿತಿದ್ದ ಒಟ್ಟು ೪೧ ವಿದ್ಯಾರ್ಥಿಗಳ ಪೈಕಿ ಎಲ್ಲರೂ ಉತ್ತೀರ್ಣರಾಗಿದ್ದು
ಟಿ.ಎನ್.ಪೃಥಿರಾಜ್, ಹೆಚ್.ಎ.ಸೌರಭ,ಆರ್.ರಂಜಿತ, ಎನ್.ಸುಪ್ರಿತಾ,ತಸ್ಮಿಯಾಖಾನಂ ವಿದ್ಯಾರ್ಥಿಗಳು ೧೦ ಪಾಯಿಂಟ್ ಗೆ ೧೦ ಪಾಯಿಂಟ್ ಗಳಿಸಿದ್ದಾರೆ.
ಲಾಂಚನ ಎಸ್(೯.೮ ಪಾಯಿಂಟ್),
ಅಕ್ಷರ,ಅಭಿಷೇಕ್,ನಿಖಿಲ್,ಮಧುಅವರುಗಳು ೯.೬ ಪಾಯಿಂಟ್, ಅಭಿಷೇಕ್,ಐಶ್ವರ್ಯ,ಪುನೀತ್,ಧನುಷ್ ವಿದ್ಯಾರ್ಥಿಗಳು ೯.೩ ಪಾಯಿಂಟ್ ಹಾಗೂ
ಕೆ.ವಿ.ಸ್ನೇಹ. ೯ ಪಾಯಿಂಟ್ ಗಳಿಸಿದ್ದು
ಶಾಲೆಗೆ ಕೀರ್ತಿ ತಂದಿದ್ದಾರೆ. ಹೆಚ್ಚು ಪಾಯಿಂಟ್ ಗಳನ್ನು ತೆಗೆಯುವ ಮೂಲಕ ಸಂಸ್ಥೆ, ಶಾಲೆ ಹಾಗೂ ಪೋಷಕರಿಗೆ ಕೀರ್ತಿತಂದ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಕೆ.ಎಸ್.ಕಿರಣ್ ಕುಮಾರ್, ಪ್ರಾಂಶುಪಾಲ ರವಿ ಹಾಗೂ ಸಿಬ್ಬಂದಿಯವರು ಅಭಿನಂದಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ