ಹುಳಿಯಾರು: ಪಟ್ಟಣದ ಶ್ರೀಜ್ಯೋತಿಪಣ ಗಾಣಿಗರ ಸಂಘ ಹಾಗೂ ಭಕ್ತಾಧಿಗಳ ಸಹಯೋಗದಲ್ಲಿ ಗಾಂಧಿಪೇಟೆಯ ಶ್ರೀ ಶನೇಶ್ವರಸ್ವಾಮಿಯ ೧೧ ನೇ ವರ್ಷದ ಮಹಾಕುಂಭಾಭಿಷೇಕ ಕಾರ್ಯ (ತಾ.೧೮) ಸೋಮವಾರ ಮಧ್ಯಾಹ್ನ ನಡೆಯಲಿದೆ.
ಕುಂಭಾಭಿಷೇಕ ಕಾರ್ಯದ ಅಂಗವಾಗಿ ಭಾನುವಾರ ಹುಳಿಯಾರಿನ ಗ್ರಾಮದೇವತೆ ದುರ್ಗಮ್ಮ, ಹುಳಿಯಾರಮ್ಮನವರನ್ನು ಕರೆತಂದು, ಪುಣ್ಯಾಹ,ದೇವನಾಂದಿ, ಮಂಡಲ ಸ್ಥಾಪನೆ, ಭಕ್ತಾಧಿಗಳಿಗೆ ಕೊಡುವ ಕಳಸ ಸ್ಥಾಪನೆ. ಶ್ರೀಪಧಾನ ಕಳಸ ಮತ್ತು ನವಗ್ರಹಗಳ ಸ್ಥಾಪನೆ ಕಾರ್ಯ ನಡೆಸಲಾಯಿತು.
ಸೋಮವಾರ ಬೆಳಿಗ್ಗೆ ನವಗ್ರಹ,ಗಣಪತಿ,ಮೃತ್ಯುಂಜಯ,ಶನೇಶ್ವರ ಹೋಮ, ನವಗ್ರಹ ಆರಾಧನೆ, ಸ್ವಾಮಿಗೆ ಪಂಚಾಮೃತಾಭಿಷೇಕ ನಡೆದ ನಂತರ ಮಧ್ಯಾಹ್ನ ೧೨ಕ್ಕೆ ಪೂರ್ಣಾಹುತಿ, ಬಲಿಪ್ರಧಾನ, ಮಹಾಮಂಗಳಾರತಿ ನಡೆದು ಕಳಸಕ್ಕೆ ಕುಂಭಾಭಿಷೇಕ ಕಾರ್ಯ ಜರುಗಲಿದೆ. ಆಗಮಿಸಿದ ಭಕ್ತಾಧಿಗಳಿಗೆ ಅನ್ನಸಂತರ್ಪಣೆಯಿದ್ದು ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಸಮಿತಿಯವರು ಕೋರಿದ್ದಾರೆ. ಇದೇ ದಿನ ರಾತ್ರಿ ಸ್ವಾಮಿಯ ರಾಜಬೀದಿ ಉತ್ಸವ ನಡೆಯಲಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ