ಮಠಮಾನ್ಯಗಳಲ್ಲಿ ಜ್ಞಾನ ದಾಸೋಹ, ಅನ್ನದಾಸೋಹ, ಧ್ಯಾನ ದಾಸೋಹ ನಡೆಯುವಂತೆ ಪ್ರಸ್ತುತ ದೇವಾಲಯಗಳಲ್ಲೂ ಸಹ ನಡೆಯುತ್ತಿದ್ದು ದೇವಾಲಯಗಳಿಗೆ ಹೋಗುವುದರಿಂದ ಮನಸ್ಸಿಗೆ ಶಾಂತಿ ಲಭಿಸುತ್ತದೆ ಎಂದು ಕುಪ್ಪೂರು ಗದ್ದಿಗೆ ಸಂಸ್ಥಾನ ಮಠದ ಡಾ|| ಯತೀಶ್ವರ ಶಿವಾಚಾರ್ಯ ಮಹಾಸ್ವಾಮೀಜಿ ತಿಳಿಸಿದರು.
ಹುಳಿಯಾರು ಹೋಬಳಿ ಕಂಪನಹಳ್ಳಿಯ ಶ್ರೀ ಆಂಜನೇಯಸ್ವಾಮಿಯ ನೂತನ ದೇವಾಲಯದ ಉದ್ಘಾಟನೆ ಅಂಗವಾಗಿ ನಡೆದ ಧಾರ್ಮಿಕ ಸಮಾರಂಭವನ್ನು ಡಾ|| ಯತೀಶ್ವರ ಶಿವಾಚಾರ್ಯ ಮಹಾಸ್ವಾಮೀಜಿ ಉದ್ಘಾಟಿಸಿದರು. |
ಹುಳಿಯಾರು ಹೋಬಳಿ ಕಂಪನಹಳ್ಳಿಯ ಶ್ರೀ ಆಂಜನೇಯಸ್ವಾಮಿಯ ನೂತನ ದೇವಾಲಯದ ಉದ್ಘಾಟನೆ ಅಂಗವಾಗಿ ಗ್ರಾಮದೇವತೆ ಕೆಂಕೆರೆ ಕಾಳಮ್ಮನ ಸಮ್ಮುಖದಲ್ಲಿ ನೂರೊಂದೆಡೆ ಸೇವೆ ನಡೆಯಿತು. |
ಹುಳಿಯಾರು ಹೋಬಳಿ ಕಂಪನಹಳ್ಳಿಯ ಶ್ರೀ ಆಂಜನೇಯಸ್ವಾಮಿಯ ನೂತನ ದೇವಾಲಯದ ಉದ್ಘಾಟನೆ ಹಾಗೂ ಕಳಶರೋಹಣ ಹಾಗೂ ಕುಂಭಾಭಿಷೇಕ ಕಾರ್ಯಕ್ರಮದ ಧಾರ್ಮಿಕ ಸಮಾರಂಭ ಉದ್ಘಾಟಿಸಿದ ಅವರು ಅಶೀರ್ವಚನ ನೀಡಿದರು.
ಮಾನವ ತನ್ನ ಜೀವನದಲ್ಲಿ ಸಂಪತ್ತು ಗಳಿಸಿದರೂ ಸಹ ಸುಖ ಶಾಂತಿಯಿಲ್ಲದ ಯಾಂತ್ರಿಕ ಜೀವನ ಸಾಗಿಸುತ್ತಿದ್ದರೆ, ಕೆಲ ಸಮುದಾಯದವರು ತಮ್ಮತಮ್ಮಲೇ ಜಾತಿವ್ಯವಸ್ಥೆಯನ್ನು ಕಟ್ಟಿಕೊಂಡು ಅಭಿವೃದ್ದಿಯಾಗದೆ ಇರುವುದು ವಿಷಾದನೀಯ ಎಂದರು. ದೇವರುಗಳಲ್ಲಿ ಹೆಚ್ಚು ಶಕ್ತಿಯುತವಾದವರು ಯಾರು ಎಂದರೆ ತಕ್ಷಣ ನೆನಪಾಗುವುದು ಆಂಜನೇಯನಾಗಿದ್ದು ಆತನ ಗುರುಭಕ್ತಿಯನ್ನು ಇಂದಿಗೂ ನೆನೆಯುತ್ತಾರೆ ಎಂದರು.
ಹಸಿರು ಸೇನೆಯ ಕೆಂಕೆರೆ ಸತೀಶ್ ಮಾತನಾಡಿ ಕಳೆದ ಹತ್ತಾರೂ ವರ್ಷದಿಂದ ಶಿಥಿಲಾವಸ್ಥೆಯಲ್ಲಿದ್ದ ದೇವಾಲಯವನ್ನು ಕಂಪನಹಳ್ಳಿಯ ಜನತೆ ಸುಂದರ ದೇವಾಲವಾಗಿ ನಿರ್ಮಿಸಿರುವುದು ಶ್ಲಾಘನೀಯ ಎಂದರು. ಕೆಲ ದೇವಾಲಯಗಳ ನಿರ್ಮಾಣದಲ್ಲಿ ಮುಂದಾಳತ್ವವಹಿಸಿದವರೇ ತಮ್ಮಲ್ಲೇ ಕಿತ್ತಾಟ ಮಾಡಿಕೊಳ್ಳುತ್ತಾರೆ ಆದರೆ ಆಂಜನೇಯಸ್ವಾಮಿ ದೇವಾಲಯ ಸಮಿತಿಯವರು ಎಲ್ಲರೊಂದಿಗೂ ವಿಶ್ವಾಸಯುತವಾಗಿದ್ದು ದೇವಾಲಯ ನಿರ್ಮಿಸಿದ್ದಾರೆ ಎಂದರು.
ಬೆಲಗೂರಿನ ಬಿಂಧುಮಾಧವಶರ್ಮ ಸ್ವಾಮೀಜಿಯವರು ದೇವಾಲಯದ ಕಳಸ ಪ್ರತಿಷ್ಠಾಪನೆ ನಡೆಸಿದರು. ಗಾಣಧಾಳು ಗ್ರಾ.ಪಂ.ಅಧ್ಯಕ್ಷ ಶಿವಮೂರ್ತಿ, ಬ್ರಹ್ಮಕುಮಾರಿ ಈಶ್ವರಿ ವಿವಿಯ ಗೀತಕ್ಕ, ಎಂ.ಜಿ.ಪಾಳ್ಯದ ಗಂಗಾಧರಯ್ಯ, ಧರ್ಮಸ್ಥಳ ಸಂಘದ ರೋಹಿತಾಕ್ಷ, ಬಸವೇಶ್ವರ ಸಹಕಾರ ಸಂಘದ ಅಧ್ಯಕ್ಷ ನೀಲಕಂಠಯ್ಯ, ದೇವಾಲಯ ಸಮಿತಿಯ ಅಧ್ಯಕ್ಷ ಮಲ್ಲೇಶಪ್ಪ, ಉಪಾಧ್ಯಕ್ಷ ಬಸವರಾಜು, ತಾಲ್ಲೂಕು ರೈತಸಂಘದ ಅಧ್ಯಕ್ಷ ಕೆ.ಪಿ.ಮಲ್ಲೇಶ್, ಕಟ್ಟಡದ ಶಿಲ್ಪಿಗಳಾದ ಅರುಣ್ ಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಸಮಿತಿಯ ಕಾರ್ಯದರ್ಶಿ ಮರುಳಸಿದ್ದಯ್ಯ ಸ್ವಾಗತಿಸಿ , ಶಿಕ್ಷಕ ನಾಗರಾಜು ನಿರೂಪಿಸಿ,ವಂದಿಸಿದರು. ಮುಖ್ಯಪ್ರಾಣ ಭಜನಾ ಮಂಡಳಿಯ ಸದಸ್ಯರು ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ