ಹುಳಿಯಾರು ಪಟ್ಟಣದ ಶ್ರೀಜ್ಯೋತಿಪಣ ಗಾಣಿಗರ ಸಂಘ ಹಾಗೂ ಭಕ್ತಾಧಿಗಳ ಸಹಯೋಗದಲ್ಲಿ ಗಾಂಧಿಪೇಟೆಯ ಶ್ರೀ ಶನೇಶ್ವರಸ್ವಾಮಿಯ ೧೧ ನೇ ವರ್ಷದ ಮಹಾಕುಂಭಾಭಿಷೇಕ ಹಾಗೂ ಹೋಮ ಕಾರ್ಯ ಸೋಮವಾರ ಶ್ರದ್ದಾಭಕ್ತಿಯಿಂದ ಜರುಗಿತು.
ಹುಳಿಯಾರಿನ ಶ್ರೀ ಶನೇಶ್ವರಸ್ವಾಮಿ ದೇವಾಲಯದಲ್ಲಿ ಕುಂಭಾಭಿಷೇಕದ ಅಂಗವಾಗಿ ನಡೆದ ಹೋಮಕ್ಕೆ ಪೂರ್ಣಾಹುತಿ ಸಮರ್ಪಿಸುತ್ತಿರುವುದು.
|
ಕುಂಭಾಭಿಷೇಕದ ಅಂಗವಾಗಿ ಭಾನುವಾರ ಸಂಜೆ ಹುಳಿಯಾರಿನ ಗ್ರಾಮದೇವತೆ ದುರ್ಗಮ್ಮ, ಹುಳಿಯಾರಮ್ಮ ಹಾಗೂ ಆಂಜನೇಯಸ್ವಾಮಿಯನ್ನು ಕರೆತಂದು, ಪುಣ್ಯಾಹ,ದೇವನಾಂದಿ, ಮಂಡಲ ಸ್ಥಾಪನೆ, ಭಕ್ತಾಧಿಗಳಿಗೆ ಕೊಡುವ ಕಳಸ ಸ್ಥಾಪನೆ. ಶ್ರೀಪ್ರಧಾನ ಕಳಸ ಮತ್ತು ನವಗ್ರಹಗಳ ಸ್ಥಾಪನೆ ಮಾಡಿದ್ದರು. ಸೋಮವಾರ ಮುಂಜಾನೆ ಎಚ್.ಎಸ್..ಲಕ್ಷ್ಮಿನರಸಿಂಹಯ್ಯ ಹಾಗೂ ಗುಂಡಣ್ಣ ಅವರ ಪೌರೋಹಿತ್ಯದಲ್ಲಿ ನವಗ್ರಹ,ಗಣಪತಿ,ಮೃತ್ಯುಂಜಯ,ಶನೇಶ್ವರ ಹೋಮ, ನವಗ್ರಹ ಆರಾಧನೆ, ಸ್ವಾಮಿಗೆ ಪಂಚಾಮೃತಾಭಿಷೇಕ ನಡೆದು ಮಧ್ಯಾಹ್ನ ೧೨ಕ್ಕೆ ಪೂರ್ಣಾಹುತಿ ಅರ್ಪಿಸಿಸಲಾಯಿತು. ಮಹಾಮಂಗಳಾರತಿ ನಂತರ ಕಳಸಕ್ಕೆ ಕುಂಭಾಭಿಷೇಕ ನಡೆಸಲಾಯಿತು. ಆಗಮಿಸಿದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು.
ಈ ವೇಳೆ ದೇವಾಲಯ ಸಮಿತಿಯವರು, ಶ್ರೀಜ್ಯೋತಿಪಣ ಗಾಣಿಗರ ಸಂಘದವರು ಸೇರಿದಂತೆ ಸುತ್ತಮುತ್ತಲ ಹಳ್ಳಿಯ ಭಕ್ತಾಧಿಗಳು ಆಗಮಿಸಿದ್ದು ಸ್ವಾಮಿಯ ಕುಂಭಾಭಿಷೇಕವನ್ನು ಕಣ್ತುಂಬಿಕೊಂಡರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ