ಇಲ್ಲಿನ ಹುಳಿಯಾರು-ಕೆಂಕೆರೆ ಸರ್ಕಾರಿ ಪ್ರೌಢಶಾಲೆಗೆ ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ.೯೧.೧೯ ಫಲಿತಾಂಶ ಬಂದಿದೆ.
ಒಟ್ಟು ೧೫೯ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ೧೪೫ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಗೌತಮ್ (೫೯೨), ವಿದ್ಯಾಶ್ರೀ(೫೮೯),ಮಂಜು(೫೭೦), ಕಲ್ಲೇಶ್ (೫೬೪) ಹಾಗೂ ಹೆಮಂತ್(೫೬೩) ಎಂಬ ಐವರು ವಿದ್ಯಾರ್ಥಿಗಳು 'ಎ+' ಗ್ರೇಡ್ ನಲ್ಲಿ ತೇರ್ಗಡೆಯಾಗಿದ್ದಾರೆ. ೧೭ ಮಂದಿ 'ಎ' ಗ್ರೇಡ್, ೩೪ ಮಂದಿ 'ಬಿ+' ಗ್ರೇಡ್, ೪೩ ಮಂದಿ 'ಬಿ' ಗ್ರೇಡ್ ಹಾಗೂ ೩೨ ಮಂದಿ ವಿದ್ಯಾರ್ಥಿಗಳು 'ಸಿ+" ಗ್ರೇಡ್ ನಲ್ಲಿ ಉತ್ತೀರ್ಣರಾಗಿದ್ದು, ೧೪ ಮಂದಿ ಅನುತ್ತೀರ್ಣರಾಗಿದ್ದಾರೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹೆಚ್ಚು ಅಂಕಗಳಿಸಿರುವುದು ಹೆಮ್ಮೆಯ ಸಂಗತಿ ಎಂದು ಉಪಪ್ರಾಂಶುಪಾಲೆ ಡಿ.ಇಂದಿರಾ , ಎಸ್ಡಿಎಂಸಿ ಉಪಾಧ್ಯಕ್ಷ ರಂಗನಕೆರೆ ಮಹೇಶ್ ಹಾಗೂ ಸಿಬ್ಬಂದಿಯವರು ಅಭಿನಂದಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ