ಇಲ್ಲಿನ ನಿತಿನ್ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಯಲ್ಲಿ ನಡೆಸುವ ಮೂರು ವರ್ಷದ ಮನೋರೋಗ ವೈದ್ಯ ತರಬೇತಿಯಲ್ಲಿ ಎಂ.ಡಿ.ಪದವಿ ಪಡೆಯುವ ಮೂಲಕ ಕೀರ್ತಿ ತಂದಿದ್ದಾನೆ.
![]() |
ನಿತಿನ್ ಅಂಬೇಕರ್ . |
ಪಟ್ಟಣದ ಶ್ರೀಧರ್ ಅಂಬೇಕರ್ ಅವರ ಪುತ್ರ ನಿತಿನ್ ಅಂಬೇಕರ್ ಪ್ರಾಥಮಿಕ ಶಿಕ್ಷಣವನ್ನು ಹುಳಿಯಾರಿನಲ್ಲಿ ಮುಗಿಸಿ ನಂತರ ವೈದ್ಯನಾಗುವ ಹಂಬಲ ಹೊಂದಿದ್ದ ಈತ ಮೈಸೂರಿನ ಎಂಎಂಸಿ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಪಡೆದಿದ್ದನು. ನಂತರ ೨೦೧೨-೧೩ ನೇ ಬ್ಯಾಚ್ ನಲ್ಲಿ ನಿಮಾನ್ಸ್ ಆಸ್ಪತ್ರೆಯಲ್ಲಿ ಸೈಕಿಯಾಸ್ಟಿ ಎಂ.ಡಿ ಪದವಿ ಪಡೆದಿದ್ದಾರೆ.ಹುಳಿಯಾರಿನಲ್ಲಿ ದಿನಪತ್ರಿಕೆಯೊಂದರ ವಿತಕರಾಗಿರುವ ಶ್ರೀಧರ್ ಅಂಬೇಕರ್ ತಮ್ಮ ಮಗನ ಈ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ