ಶಿರಾ ತಾಲ್ಲೂಕಿನ ಮಾಗೋಡಿನ ಶ್ರೀಕಂಬದ ರಂಗನಾಥಸ್ವಾಮಿಗೆ ಶಿರಾ ಟೌನ್ ಕೋ ಅಪರೇಟೀವ್ ಬ್ಯಾಂಕ್ ನ ಕಾರ್ಯದರ್ಶಿಯಾಗಿದ್ದ ದಿವಂಗತ ರತ್ನಮ್ಮ, ವೆಂಕಟಾಚಲ ಶೆಟ್ಟಿ ಅವರ ಸ್ಮರಣಾರ್ಥ ಅವರ ಮಕ್ಕಳು (ತಾ.೧೭) ಭಾನುವಾರ ನಾಗಾಭರಣ ಪೀಠ ಅರ್ಪಿಸಿ ಉತ್ಸವ ನಡೆಸಲಿದ್ದಾರೆ.
![]() |
ಕೆ.ವಿ.ಕುಮಾರಸ್ವಾಮಿಯವರು ರಂಗನಾಥಸ್ವಾಮಿಗೆ ಅರ್ಪಿಸಿಸಲಿರುವ ಪಂಚಲೋಹದ ನಾಗಾಭರಣದ ಪೀಠ. |
ಶಿರಾ ಟೌನ್ ಕೋ ಅಪರೇಟೀವ್ ಬ್ಯಾಂಕ್ ಹುಳಿಯಾರು ಶಾಖೆಯ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಕೆ.ವಿ.ಕುಮಾರಸ್ವಾಮಿ ಅವರು ಪಂಚಲೋಹದಿಂದ ತಯಾರಿಸಿದ ನಾಗಾಭರಣ ಪೀಠವನ್ನು ಸ್ವಾಮಿಗೆ ಅರ್ಪಿಸುತ್ತಿದ್ದು ಮಧ್ಯಾಹ್ನ ೧೨ ಗಂಟೆ ಸ್ವಾಮಿಯ ಉತ್ಸವ ಹಾಗೂ ಪ್ರಸಾದ ವಿನಿಯೋಗ ಕಾರ್ಯಕ್ರಮ ನಡೆಯಲಿರುವುದಾಗಿ, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಕೋರಿದ್ದಾರೆ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ