ಹುಳಿಯಾರು ಪಟ್ಟಣದ ವಾಸವಿ ವಿದ್ಯಾ ಸಂಸ್ಥೆಯ ವಾಸವಿ ಆಂಗ್ಲ ಮಾಧ್ಯಮ ಶಾಲೆಗೆ ಪ್ರಸಕ್ತ ವರ್ಷದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ.೯೫.೮ ರಷ್ಟು ಫಲಿತಾಂಶ ಬಂದಿರುವುದಾಗಿ ಶಾಲೆಯ ಮುಖ್ಯ ಶಿಕ್ಷಕ ಡಿ.ಮಹೇಶ್ ತಿಳಿಸಿದ್ದಾರೆ.
ಹುಳಿಯಾರಿನ ವಾಸವಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹೆಚ್ಚು ಅಂಕಗಳಿಸಿದ ಎನ್.ಆರ್.ರೂಪ (೫೭೧) ಹಾಗೂ ದೀಕ್ಷಿತ್ (೫೬೯). |
ಶಾಲೆಯ ಒಟ್ಟು ೭೫ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ೬೯ ಮಂದಿ ತೇರ್ಗಡೆಯಾಗಿದ್ದಾರೆ. ಎನ್.ಆರ್.ರೂಪ ೫೭೧ ಅಂಕ(ಶೇ.೯೧.೩೬), ದೀಕ್ಷಿತ್ ೫೬೯ ಅಂಕ (ಶೇ.೯೧.೦೪), ಎಂ.ವಿನಾಯಕ ೫೬೨ ಅಂಕ(ಶೇ.೮೯.೯), ಮೇಧಸ್ವಿನಿ.ಬಿ.ತಾಳಂಕಿ ೫೫೬ ಅಂಕ(ಶೇ.೮೮.೯), ಎಂ.ಎಸ್.ಮನೋಜ್ ೫೫೪ ಅಂಕ(ಶೇ.೮೮.೬) ಹಾಗೂ ಕಾಂಚನ ೫೩೯ ಅಂಕ(ಶೇ.೮೬.೨೪) ಗಳಿಸುವ ಮೂಲಕ ಶಾಲೆಗೆ ಹಾಗೂ ಪೋಷಕರಿಗೆ ಕೀರ್ತಿ ತಂದಿದ್ದಾರೆ. ಹೆಚ್ಚು ಅಂಕಗಳಿದ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಲಕ್ಷ್ಮಿಕಾಂತ್. ಕಾರ್ಯದರ್ಶಿ ರಾಮಾನಂಥ್, ಮೇಲ್ವಿಚಾರಕ ಬಿ.ವಿ.ಶ್ರೀನಿವಾಸ್ ಹಾಗೂ ಮುಖ್ಯಶಿಕ್ಷಕ ಮಹೇಶ್, ಸಿಬ್ಬಂದಿಯವರು ಅಭಿನಂದಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ