ಇಲ್ಲಿನ ಗ್ರಾಮದೇವತೆ ಶ್ರೀ ದುರ್ಗಾಪರಮೇಶ್ವರಿ ದೇವಿಯ ಜಾತ್ರೆ ನಡೆದು ಒಂದು ತಿಂಗಳು ಮುಗಿದ ನಿಟ್ಟಿನಲ್ಲಿ ಮಂಗಳವಾರ ತಿಂಗಳ ಬಾನದ ಆಚರಣೆ ನಡೆಯಿತು.
![]() |
ಹುಳಿಯಾರು ದುರ್ಗಮ್ಮನಿಗೆ ತಿಂಗಳುಬಾನದ ಆಚರಣೆ ಅಂಗವಾಗಿ ಗೃಹಿಣಿಯರು ಆರತಿ ಮಾಡುತ್ತಿರುವುದು. |
ಬಾನದ ಅಂಗವಾಗಿ ಗೃಹಿಣಿಯರು ದೇವಾಲಯಕ್ಕೆ ತೆರಳಿ ಅಮ್ಮನವರಿಗೆ ಮಡಿಲಕ್ಕಿ ಸಲ್ಲಿಸಿ ಆರತಿ ಮಾಡುವ ಮೂಲಕ ಪೂಜೆ ಸಲ್ಲಿಸಿದರು. ಹುಳಿಯಾರು ಸೇರಿದಂತೆ ಲಿಂಗಪ್ಪನಪಾಳ್ಯ,ಸೋಮಜ್ಜನಪಾಳ್ಯ,ಕಾಮಶೆಟ್ಟಿಪಾಳ್ಯ,ಸೂರಗೊಂಡನಹಳ್ಳಿಯ ಭಕ್ತಾಧಿಗಳು ಆಗಮಿಸಿ ಅಮ್ಮನವರ ದರ್ಶನ ಪಡೆದು ಪೂಜೆಸಲ್ಲಿಸಿದರು. ಕೆಲ ಭಕ್ತರು ಕೋಳಿಯನ್ನು ಬಲಿ ನೀಡುವ ಮೂಲ ಬಾನದ ಆಚರಣೆ ನಡೆಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ