ಹುಳಿಯಾರು ಪಟ್ಟಣದಲ್ಲಿ ಸಣ್ಣದಾದ ಸೈಕಲ್ ಶಾಪ್ ಇಟ್ಟುಕೊಂಡು ಜೀವನ ನಡೆಸುತ್ತಿರುವ ಮಹಮದ್ ಖಲಂದರ್ ಸಾಬ್ ಅವರ ಮಗಳು ಸಿಮ್ರಾನ್ ಎಂಬಾಕೆ ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ೫೨೮ ಅಂಕ (ಶೇ.೮೪.೪) ಗಳಿಸಿದ್ದಾಳೆ.
ಈಕೆ ವಾಸವಿ ವಿದ್ಯಾಸಂಸ್ಥೆಯ ಟಿ.ಆರ್.ಎಸ್.ಆರ್ ಶಾಲೆಯ ವಿದ್ಯಾರ್ಥಿನಿಯಾಗಿದ್ದು, ಮನೆಯ ಕಷ್ಟದ ನಡುವೆಯೂ ಸಹ ಉತ್ತಮ ಅಭ್ಯಾಸ ಮಾಡಿ ಹೆಚ್ಚಿನ ಅಂಕಗಳಿಸಿದ್ದಾಳೆ. ಮಗಳ ಈ ಸಾಧನೆ ಪೋಷಕರಿಗೆ ಸಂತಸ ತಂದಿದ್ದು, ಪಿಯುಸಿಯಲ್ಲಿ ವಾಣಿಜ್ಯ ವಿಭಾಗ ಪಡೆಯುವ ಮೂಲಕ ಹಂಬಲ ಹೊಂದಿದ್ದಾಳೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ