ಇಲ್ಲಿನ ಗ್ರಾಮದೇವತೆ ಶ್ರೀ ದುರ್ಗಾಪರಮೇಶ್ವರಿ ದೇವಿಯ ದೇವಾಲಯದ ಹುಂಡಿ ಹಣವನ್ನು ಬುಧವಾರದಂದು ದೇವಾಲಯ ಸಮಿತಿ ಧರ್ಮದರ್ಶಿ ಶಿವಕುಮಾರ್ ಅವರ ಸಮ್ಮುಖದಲ್ಲಿ ಎಣಿಕೆ ಮಾಡಲಾಯಿತು.
ಹುಳಿಯಾರಿನ ಗ್ರಾಮದೇವತೆ ಶ್ರೀದುರ್ಗಮ್ಮನ ದೇವಾಲಯದ ಹುಂಡಿಹಣದ ಎಣಿಕೆ ಕಾರ್ಯದಲ್ಲಿ ತೊಡಗಿರುವ ಸಮಿತಿ ಧರ್ಮದರ್ಶಿ ಹಾಗೂ ಸದಸ್ಯರುಗಳು |
ದೇವಾಲಯದಲ್ಲಿರುವ ಹುಂಡಿಯನ್ನು ಪ್ರತಿ ವರ್ಷ ಜಾತ್ರೆಯ ತಿಂಗಳು ಬಾನದ ನಂತರ ದೇವಾಲಯ ಧರ್ಮದರ್ಶಿ ಹಾಗೂ ಸಮಿತಿಯ ಸದಸ್ಯರುಗಳ ಸಮ್ಮುಖದಲ್ಲಿ ಎಣಿಕೆಕಾರ್ಯ ಮಾಡುವುದು ರೂಢಿಯಲಿದೆ. ಅಂತೆಯೇ ಈ ಬಾರಿಯೂ ನಡೆದಿದ್ದು ೨ಲಕ್ಷದ ೪೪ ಸಾವಿರ ರೂ ಸಂಗ್ರಹವಾಗಿರುವುದಾಗಿ ಸಮಿತಿಯ ಕಾರ್ಯದರ್ಶಿ ಹು,ಕೃ.ವಿಶ್ವನಾಥ್ ತಿಳಿಸಿದರು. ಸಂಗ್ರಹವಾದ ಹಣವನ್ನು ದೇವಾಲಯ ಅಭಿವೃದ್ದಿಗೆ ಬಳಸಲಾಗುವುದಿದ್ದು, ಹುಂಡಿಹಣದ ಎಣಿಕೆ ವೇಳೆ ಸಮಿತಿಯ ಸದಸ್ಯರಾದ ಬಡಗಿರಾಮಣ್ಣ,ಪಟೇಲ್ ರಾಜ್ ಕುಮಾರ್, ಕಾತೂರಯ್ಯ, ಬಾಲಣ್ಣ, ಆಚಾರ್ ರಮೇಶ್, ಭೈರೇಶ್ ಮತ್ತಿತರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ