ಹುಳಿಯಾರು : ಪಟ್ಟಣದ ವಿವೇಕಾನಂದ ರಸ್ತೆ ಮೂಲಕ ಮಾಜಿ ಛೇರ್ಮನ್ ವೆಂಕಟಾಛಲಪತಿ ಶೆಟ್ಟಿ ಅವರ ಮನೆ ಬೀದಿಯಿಂದ ಗಾಂಧಿಪೇಟೆಯ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿನ ಚರಂಡಿ ದುರಸ್ಥಿ ಕಾಮಗಾರಿ ಅರ್ಧಕ್ಕೆ ನಿಂತಿದ್ದು ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗಿದೆ.
ಹುಳಿಯಾರಿನ ಮಸೀದಿ ರಸ್ತೆಯಿಂದ ಗಾಂಧಿಪೇಟೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಅರ್ಧಕ್ಕೆ ನಿಂತಿರುವ ಚರಂಡಿ ಕಾರ್ಯ. |
ಈ ರಸ್ತೆಯಲ್ಲಿನ ಚರಂಡಿಯಲ್ಲಿ ಹೂಳು ತುಂಬಿಕೊಂಡು ನೀರು ಸರಿಯಾಗಿ ಹರಿಯದೆ ಶೇಖರಣೆಯಾಗುತ್ತಿತ್ತಲ್ಲದೆ ಚರಂಡಿ ಮೇಲೆ ಹಾಕಿದ್ದ ಕೆಲ ಚಪ್ಪಡಿಕಲ್ಲುಗಳು ಸಹ ಮುರಿದು ಬಿದ್ದು ವಾಹನ ಸಂಚಾರಕ್ಕೆ ತೊಡಕಾಗಿತ್ತು. ಈ ಬಗ್ಗೆ ಪಂಚಾಯ್ತಿಯವರ ಗಮನಕ್ಕೆ ತಂದ ಕೆಲ ದಿನಗಳನಂತರ ಕೆಲಸ ಪ್ರಾರಂಭಿಸಿ, ಚರಂಡಿ ಮೇಲಿದ್ದ ಕಲ್ಲುಗಳನ್ನು ಹೊರತೆಗೆದು ಹಾಕಿ, ಚರಂಡಿಯ ಎರಡು ಬದಿ ಸೈಜ್ ಕಲ್ಲಿನಿಂದ ಗೋಡೆ ಕಟ್ಟಿರುವುದನ್ನು ಬಿಟ್ಟರೆ ಮತ್ಯಾವುದೇ ಕಾರ್ಯ ಮಾಡದೆ ಅರ್ಥಕ್ಕೆ ಕೈ ಬಿಟ್ಟಿದ್ದಾರೆ.
ಇದರಿಂದಾಗಿ ಸಂಚಾರಕ್ಕೆ ತೊಂದರೆಯಾಗಿರುವುದಲ್ಲದೆ ಕೊಳಚೆ ನೀರು ನಿಂತು ಸೊಳ್ಳೆ ಹೆಚ್ಚಾಗುವಂತೆ ಮಾಡಿದೆ. ಸದ್ಯ ಕಟ್ಟಿರುವ ಗೋಡೆಯು ಸಹ ಕಳಪೆಯಿಂದ ಕೂಡಿದ್ದು ಅದರ ಮೇಲೆ ದಪ್ಪ ಚಪ್ಪಡಿಕಲ್ಲುಗಳನ್ನು ಹಾಕಿದರೆ ಕೆಲ ದಿನಗಳಲೇ ಕುಸಿಯುವ ಸಾಧ್ಯತೆ ಹೆಚ್ಚಿದೆ. ಈ ಬಗ್ಗೆ ಗ್ರಾ.ಪಂ. ಪಿಡಿಓ ಅವರು ಶೀಘ್ರ ಗಮನ ಹರಿಸಿ ಉತ್ತಮ ಗುಣಮಟ್ಟದಲ್ಲಿ ಕಾಮಗಾರಿ ನಡೆಸುವಂತೆ ಇಲ್ಲಿನ ನಿವಾಸಿಗಳು ಒತ್ತಾಯಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ