ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮದ ಸ್ವಯಂಸೇವಕ ಯುವಕ ಸಂಘದವರು ಗ್ರಾಮ ಪಂಚಾಯ್ತಿ ಚುನಾವಣೆ ಅಂಗವಾಗಿ ಶನಿವಾರದಂದು ಗ್ರಾಮದ ಬೀದಿಬೀದಿಗಳಲ್ಲಿ ಜಾಥಾ ನಡೆಸುವ ಮೂಲಕ ಚುನಾವಣಾ ಜಾಗೃತಿ ಮೂಡಿಸುವ ಕಾರ್ಯ ಮಾಡಿದರು.
ಗ್ರಾಮದ ಶ್ರೀಕಾಳಿಕಾಂಬದೇವಿ ದೇವಾಲಯದಿಂದ ಪ್ರಾರಂಭವಾದ ಜಾಥಾದಲ್ಲಿ ಸಂಘದ ಪದಾಧಿಕಾರಿಗಳು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, " ಎಲೆಕ್ಷನ್, ಇದು ನಿಮ್ಮ ಸೆಲೆಕ್ಷನ್" ಎಂಬ ಶಿರೋನಾಮೆಯ ಕರಪತ್ರವನ್ನು ಸಾರ್ವಜನಿಕರಿಗೆ ಹಂಚುವ ಮೂಲಕ ಜನಜಾಗೃತಿ ಉಂಟುಮಾಡಿದರು. ತಲೆಗೊಂದು ಓಟು ,ತೊಲಗಬೇಕು ನೋಟು, ನೋಟು ನೋಡಿ ಓಟು ಹಾಕಬೇಡಿ, ಹಣಹೆಂಡಕ್ಕೆ ಮಾರು ಹೋಗಿ ಗ್ರಾಮದ ಅಭಿವೃದ್ದಿಗೆ ಮಾರಕವಾಗಬೇಡಿ ಎಂದು ಘೋಷಣೆಗಳನ್ನು ಕೂಗುತ್ತಾ ಸಾರ್ವಜನಿಕರಿಗೆ ಮತದಾನದ ಮಹತ್ವದ ಬಗ್ಗೆ ತಿಳಿಸಿದರು.
ಗ್ರಾಮದ ಯುವಕರು ಸ್ವಯಂಪ್ರೇರಣೆಯಿಂದ ಜಾಗೃತಿ ಕಾರ್ಯಕ್ರಮ ಮಾಡುತ್ತಿದ್ದನ್ನು ಕಂಡವರು ಅಶ್ಚರ್ಯದಿಂದ ನೋಡುತ್ತಿದ್ದರು. ಈ ವೇಳೆ ಶರತ್,ರಂಗನಾಥ್, ಗಿರೀಶ್, ಅರುಣ್, ರಾಕೇಶ್, ನಾಗರಾಜ್, ಕಂಠೇಶ್, ಕೃಷ್ಣಸಿಂಗ್ ಸೇರಿದಂತೆ ಇತರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ