ಹುಳಿಯಾರು ಹೋಬಳಿ ಕಂಪನಹಳ್ಳಿಯ ಶ್ರೀ ಆಂಜನೇಯಸ್ವಾಮಿಯ ನೂತನ ದೇವಾಲಯದ ಉದ್ಘಾಟನೆ, ಕಳಶರೋಹಣ ಹಾಗೂ ಕುಂಭಾಭಿಷೇಕ ಕಾರ್ಯ ತಾ.೫ರ ಮಂಗಳವಾರ ಮತ್ತು ತಾ.೬ರ ಬುಧವಾರ ನಡೆಯಲಿದೆ.
ತಾ.೪ರ ಸೋಮವಾರ ಸಂಜೆ ಕೆಂಕೆರೆಯ ಗ್ರಾಮದೇವತೆ ಶ್ರೀಕಾಳಿಕಾಂಭ ದೇವಿ , ದಮ್ಮಡಿಹಟ್ಟಿಯ ಈರಬೊಮ್ಮಕ್ಕದೇವಿ, ಗೊಲ್ಲರಹಟ್ಟಿಯ ಕರಿಯಮ್ಮ ದೇವರುಗಳ ಆಗಮನದೊಂಡಿಗೆ ಕೋಡೂಭೇಟಿ ನಡೆಯಲಿದೆ. ತಾ.೫ರ ಮಂಗಳವಾರ ಮುಂಜಾನೆಯಿಂದ ವಿವಿಧ ಪೂಜಾ ಕಾರ್ಯಗಳು ನಡೆಯಲಿದ್ದು, ದೇವತಾಪ್ರಾರ್ಥನೆ,ಯಾಗಶಾಲಾ ಪ್ರವೇಶ,ಸಂಕಲ್ಪ,ಗಣಪತಿ ಪೂಜೆ,ಪುಣ್ಯಾಹ,ಪಂಚಗವ್ಯ ಮೇಳನ, ಮಹಾಸಂಕಲ್ಪ, ಸರ್ಷಪ ವಿಕಿರಣ, ಕೌತುಕ ಬಂಧನ ಅಂಕುರಾರ್ಪಣೆ,ಬಿಂಬ ಶುದ್ದಿ, ಜಲಾಧಿವಾಸ, ಕ್ಷೀರಾಧಿವಾಸ, ವಸ್ತ್ರಾಧಿವಸ, ಧಾನ್ಯಾಧಿವಾಸ,ಪುಷ್ಪಾಧಿವಾಸ, ಗಣಪತಿ ಹೋಮ,ಪಂಚಗವ್ಯ ಪ್ರಾಯಚ್ಛಿತ್ತ ಹೋಮ,ನವಗ್ರಹ ಹೋಮದ ನಂತರ ಪೂರ್ಣಾಹುತಿ ,ಮಹಾಮಂಗಳಾರತಿ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.
ತಾ.೬ ರ ಬುಧವಾರ ಬೆಳಿಗ್ಗೆ ಆಂಜನೇಯಸ್ವಾಮಿ ಮೂಲಮಂತ್ರ ಹೋಮ, ಪೂಜಾಂಗ,ಪ್ರತಿಷ್ಠಾಂಗ,ಶಿಖರ ಪ್ರತಿಷ್ಠಾಂಗ ಹೋಮ ನಡೆದ ನಂತರ ಮಹಾಪೂರ್ಣಾಹುತಿ,ಕುಂಭಾಭಿಷೇಕ ಹಾಗೂ ಗುರುಗಳ ಪಾದಪೂಜಾ ಕಾರ್ಯ ಜರುಗಲಿದೆ. ಕುಪ್ಪೂರು ಗದ್ದಿಗೆ ಸಂಸ್ಥಾನ ಮಠದ ಡಾ|| ಯತೀಶ್ವರ ಶಿವಾಚಾರ್ಯ ಮಹಾಸ್ವಾಮೀಜಿ ಹಾಗೂ ಬೆಲಗೂರಿನ ಬಿಂಧುಮಾಧವಶರ್ಮ ಸ್ವಾಮೀಜಿಯವರು ಕಳಶಾರೋಹಣ ನೆರವೇರಿಸಲಿದ್ದು ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಸಮಿತಿಯವರು ಕೋರಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ