ಗ್ರಾಮ ಪಂಚಾಯ್ತಿ ಚುನಾವಣೆ ಹಿನ್ನಲೆಯಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಹೋಬಳಿಯ ಕಾಮನಬಿಲ್ಲು ಫೌಂಡೇಶನ್ ನ ಸಂಚಾಲಕರು ಪಟ್ಟಣದಲ್ಲಿ ಚುನಾವಣಾ ಜನಜಾಗೃತಿ ಕಾರ್ಯಕ್ರಮ ನಡೆಸಿದರು.
ಕಾಮನಬಿಲ್ಲು ಫೌಂಡೇಶನ್ ನ ಅಧ್ಯಕ್ಷ ಎಂ.ಚನ್ನಕೇಶವ ನೇತೃತ್ವದಲ್ಲಿ ಸಂಘದ ಸದಸ್ಯರುಗಳು ಪಟ್ಟಣದ ಮನೆ ಹಾಗೂ ಅಂಗಡಿಗಳಲ್ಲಿಗೆ ತೆರಳಿ ತಾವು ಸಿದ್ದಪಡಿಸಿದ ಕರಪತ್ರವನ್ನು ನೀಡುತ್ತಾ ಮತದಾರರಲ್ಲಿ ಜಾಗೃತಿ ಮೂಡಿಸಿದರು. "ಸ್ವಚ್ಚ ಅಭ್ಯರ್ಥಿ ಆರಿಸಿ , ಸ್ವಚ್ಚ ಸಮಾಜವನ್ನು ರೂಪಿಸಿ" ಎಂಬ ಕರಪತ್ರದಲ್ಲಿ ಮುದ್ರಿಸಿ ಹಂಚಿದರು. ಮತದಾರರು ಯಾವುದೇ ಹಣ,ಮದ್ಯದ ಆಮಿಷಕ್ಕೆ ಒಳಗಾಗಬೇಡಿ, ಇಂದು ನಿಮಗೆ ಹಣಕೊಟ್ಟವರು ಗೆದ್ದಮೇಲೆ ನಿಮ್ಮಿಂದಲೇ ಹಣ ದೋಚುತ್ತಾರೆ. ಉತ್ತಮ ವ್ಯಕ್ತಿತ್ವ ಹೊಂದಿದ ವ್ಯಕ್ತಿಯ ಆಯ್ಕೆ ಮುಖ್ಯ, ನಮ್ಮನ್ನು ಆಳುವವರು ಒಳ್ಳೆಯವರಾಗಿರಬೇಕು. ಯಾವುದೇ ಜಾತಿ,ಮತ ಭೇದವಿಲ್ಲದೆ ಆದರ್ಶ ವ್ಯಕ್ತಿಯ, ಭ್ರಷ್ಟ ವ್ಯವಸ್ಥೆಯ ವಿರುದ್ದ ಹೋರಾಡುವ ಮನೋಭಾವ ಹೊಂದಿರುವವರನ್ನು, ಮತದಾರರಿಗೆ ಅಗತ್ಯ ಬೇಕಾದ ಮೂಲಭೂತ ಸೌಕರ್ಯಗಳ ಬಗ್ಗೆ ಅರಿವಿರುವ ಅಭ್ಯರ್ಥಿಯ ಆಯ್ಕೆ ಮಾಡಬೇಕು. ಗ್ರಾಮದ ಏಳ್ಗೆಗೆ, ಜನಸಮುದಾಯದ ಒಳಿತಿಗಾಗಿ ಸಕ್ರಿಯವಾಗಿ ದುಡಿಯುವ ವಿದ್ಯಾವಂತರನ್ನು ಆಯ್ಕೆ ಮಾಡಿ ಎಂದು ಮುದ್ರಿಸಿ ಮತದಾರರಿಗೆ ವಿತರಿಸುತ್ತಾ ಜಾಗೃತಿ ಮೂಡಿಸಿದರು.
ಈ ವೇಳೆ ಅಧ್ಯಕ್ಷ ಚನ್ನಕೇಶವ, ಉಪಾಧ್ಯಕ್ಷ ಪ್ರಕಾಶ್,ಕಾರ್ಯದರ್ಶಿ ವಿಜಯ್ ಕುಮಾರ್,ಉಪಕಾರ್ಯದರ್ಶಿ ಚಂಬಣ್ಣ,ದಯಾನಂದ್, ರವಿ,ಯೋಗೀಶ್,ಚೇತನ್ ಸೇರಿದಂತೆ ಇತರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ